ETV Bharat / state

ಕಲಬುರಗಿಯಲ್ಲಿ ಇಂದು ಐವರಲ್ಲಿ ಕೊರೊನಾ ಪತ್ತೆ: ದ್ವಿಶತಕದ ಸನಿಹ ಸೋಂಕಿತರು - Quartine Center of kalburgi

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂದು ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು , ಇವರೆಲ್ಲರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.

5 new coronavirus cases reported in kalburgi
ಕಲಬುರಗಿಯಲ್ಲಿ ಕೊರೊನಾ ತಾಂಡವ: ಇಂದು ಐವರಲ್ಲಿ ಸೋಂಕು ಪತ್ತೆ
author img

By

Published : May 28, 2020, 10:39 PM IST

ಕಲಬುರಗಿ: ಮಹಾರಾಷ್ಟ್ರದಿಂದ‌ ಮರಳಿರುವ ಜಿಲ್ಲೆಯ ಐವರಲ್ಲಿ ಕೊರೊನಾ ಸೋಂಕು‌ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಸೇಡಂ ತಾಲೂಕಿನ‌ ಮೇದಕ್ ಗ್ರಾಮದ 30 ವರ್ಷದ ಮಹಿಳೆ (ಪಿ-2422), ಶಹಾಬಾದ್​​ ತಾಲೂಕಿನ ಭಂಕೂರ ಬಳಿಯ ತರಿ ತಾಂಡಾದ 30 ವರ್ಷದ ಮಹಿಳೆ (ಪಿ-2492), ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 9 ವರ್ಷದ ಬಾಲಕನಿಗೆ (ಪಿ-2493), 4 ವರ್ಷದ ಬಾಲಕ ಮತ್ತು 25 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟಿದೆ ಎಂದು ಹೇಳಿದರು.

ಇವರೆಲ್ಲರನ್ನು ಸರ್ಕಾರಿ ಕ್ವಾರಂಟೈನ್​​ನಲ್ಲಿ ಇರಿಸಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿದ್ದು, 7 ಜನ ಮೃತಪಟ್ಟಿದ್ದಾರೆ. 106 ಜನರಿಗೆ ಚಿಕಿತ್ಸೆ‌ ಮುಂದುವರಿಸಲಾಗಿದೆ ಎಂದು ಶರತ್ ಅವರು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.