ಕಲಬುರಗಿ: ಕೋವಿಡ್-19 ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ನಾಲ್ಕು ಕಡೆ ಫಿವರ್ ಕ್ಲಿನ್ ಆರಂಭವಾಗಿವೆ. ಏಪ್ರಿಲ್ 6ರಿಂದಲೇ ಇವು ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯ ಅಶೋಕ ನಗರ, ಶಿವಾಜಿ ನಗರ, ನ್ಯೂ ರೆಹಮತ್ ನಗರಗಳಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರಗಳು ಹಾಗೂ ತಾರಪೈಲ್ ಸಾರ್ವಜನಿನ ಆಸ್ಪತ್ರೆಯನ್ನು ಜ್ವರ ತಪಾಸಣಾ ಕೇಂದ್ರವೆಂದು ಗುರುತಿಸಲಾಗಿದೆ. ಈ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಪಾಳಿ ಆಧಾರದ ಮೇಲೆ ವೈದ್ಯರು, ಸ್ಟಾಫ್ ನರ್ಸ್ ಹಾಗೂ ಇನ್ನಿತರ ಸಿಬ್ಬಂದಿ ಕರ್ತವ್ಯ ನಿರ್ವಹಿಲಿದ್ದಾರೆ.
ನೆಗಡಿ, ಕೆಮ್ಮು, ಜ್ವರ ಹಾಗು ಉಸಿರಾಟದ ತೊಂದರೆ ಕಂಡುಬಂದಲ್ಲಿ ಕಲಬುರಗಿ ನಗರದ ಸಾರ್ವಜನಿಕರು ಸಮೀಪದ ಈ ಜ್ವರ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಿ. ಸಿ. ಶರತ್ ಬಿ. ತಿಳಿಸಿದ್ದಾರೆ.