ETV Bharat / state

ಕಲಬುರಗಿಯಲ್ಲಿ ಮೂವರು ಕೊರೊನಾದಿಂದ ಗುಣಮುಖ: ನಿಟ್ಟುಸಿರು ಬಿಟ್ಟ ಜನತೆ - ಕಲಬುರಗಿ ಕೊರೊನಾ ಸಂಖ್ಯೆ

ನಗರದ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ನಿನ್ನೆ ಹಾಗೂ ಇಂದು ಬೆಳಗಿನ ತನಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲದ ಕಾರಣ ಜಿಲ್ಲೆಯ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

3 patients recovered from corona in Kalabaragi, ಕಲಬುರಗಿಯಲ್ಲಿ ಮೂವರು ಕೊರೊನಾದಿಂದ ಗುಣಮುಖ
ಕಲಬುರಗಿಯಲ್ಲಿ ಮೂವರು ಕೊರೊನಾದಿಂದ ಗುಣಮುಖ.. ನಿಟ್ಟುಸಿರು ಬಿಟ್ಟ ಜನತೆ
author img

By

Published : May 22, 2020, 3:17 PM IST

ಕಲಬುರಗಿ: ನಗರದ ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ನಗರದ ಕರೀಂ ನಗರದ 35 ವರ್ಷದ ವ್ಯಕ್ತಿ ಪಿ-697, ಇಸ್ಲಾಮಾಬಾದ್ ಕಾಲೋನಿಯ 36 ವರ್ಷದ ಮಹಿಳೆ ಪಿ-698 ಮತ್ತು 41 ವರ್ಷದ ವ್ಯಕ್ತಿ ಪಿ-699 ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಪೀಡಿತ 134 ರೋಗಿಗಳಲ್ಲಿ ಏಳು ಜನ ನಿಧನರಾಗಿದ್ದು, 58 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 69 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ನಿನ್ನೆ ಹಾಗೂ ಇಂದು ಬೆಳಗಿನ ತನಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲದ ಕಾರಣ ಜಿಲ್ಲೆಯ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.