ಕಲಬುರಗಿ: ಈ ವರ್ಷದಲ್ಲಿ ಮುಂಗಾರು ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಏಳನೇ ಹಂತದ ಪರಿಹಾರವನ್ನು ಜಿಲ್ಲಾಧಿಕಾರಿ ಯಶವಂತ ಗುರುಕರ್ ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ 8,815 ರೈತರಿಗೆ 9.24 ಕೋಟಿ ರೂ. ಬೆಳೆ ಪರಿಹಾರಕ್ಕೆ ಅನುಮೋದನೆ ನೀಡಿದ್ದಾರೆ.
ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ 1.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ, ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಅನುಮೋದನೆ ನೀಡಿದ ಪರಿಹಾರವನ್ನು 2 ದಿನದಲ್ಲಿ ರೈತರ ಖಾತೆಗೆ ಜಮೆ ಆಗಲಿದೆ. ಒಟ್ಟಾರೆ 7 ಹಂತದಲ್ಲಿ ಒಟ್ಟು 2,57,439 ರೈತರಿಗೆ 234.04 ಕೋಟಿ ರೂ. ಪರಿಹಾರ ನೀಡಿದಂತಾಗಿದೆ ಎಂದು ಡಿಸಿ ಯಶವಂತ ಗುರುಕರ್ ತಿಳಿಸಿದರು.
ಇದನ್ನೂ ಓದಿ:ಮತದಾರರ ಪರಿಷ್ಕರಣೆ ಅಕ್ರಮ ಬಗ್ಗೆ 2013 ರಿಂದ ಸಮಗ್ರ ತನಿಖೆ ಕೈಗೊಳ್ಳಿ: ಬಿಜೆಪಿ ನಿಯೋಗ ದೂರು