ಕಲಬುರಗಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದು. ಓರ್ವ ಗಂಭೀರಗಾಯಗೊಂಡಿರುವ ಘಟನೆ ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಮೌನೇಶ್ ಪೂಜಾರಿ (22)ಮೃತ ಯುವಕನಾಗಿದ್ದು.ಬೈಕ್ ಮೇಲೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೌನೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ.ವಿನೋಂದ ರಾಠೋಡ್ ಎಂಬ ಇನ್ನೋರ್ವ ಯುವಕ ಗಾಯಗೊಂಡಿದ್ದು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಕ್ಕಿ ಹೋಡೆದ ವಾಹನ ಯಾವುದು ಎಂಬದು ಇನ್ನು ತಿಳಿದು ಬಂದಿಲ್ಲ.ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.