ETV Bharat / state

ಯುವತಿಯ ಪ್ರೀತಿ ಬಲೆಗೆ ಬಿದ್ದ ಬಾಲಕ: ಬುದ್ಧಿ ಮಾತು ಕೇಳದ್ದಕ್ಕೆ ಕೈಕಾಲು ಕಟ್ಟಿ ಭೀಮಾ ನದಿಗೆ ಎಸೆದ ಕಿರಾತಕರು! - ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ 14 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು, ಬಳಿಕ ಕೈಕಾಲು ಕಟ್ಟಿ ಭೀಮಾ ನದಿಯಲ್ಲಿ ಎಸೆದಿರುವ ಘಟನೆ ಬೆಳೆಕಿಗೆ ಬಂದಿದೆ. ಈ ಕೊಲೆಗೆ ಪ್ರೀತಿಯ ವಿಷಯ ಕಾರಣ ಎಂದು ಹೇಳಲಾಗ್ತಿದೆ.

14-year-old boy tortured and killed in kalaburagi
14 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆ
author img

By

Published : Feb 28, 2021, 10:39 AM IST

ಕಲಬುರಗಿ: 14 ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು, ಬಳಿಕ ಕೈಕಾಲು ಕಟ್ಟಿ ಭೀಮಾ ನದಿಯಲ್ಲಿ ಎಸೆದಿರುವ ಘಟನೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.

ಪ್ರೀತಿಯ ವಿಷಯವಾಗಿ ಬಾಲಕನ ಹತ್ಯೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನರಿಬೋಳ ಗ್ರಾಮದ 14ರ ಬಾಲಕ ಅದೇ ಗ್ರಾಮದ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಆದರೆ, ಯುವತಿಯ ತಾಯಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ, ತನ್ನ ಪರಿಚಯಸ್ಥ ಮೆಹಬೂಬ್ ಎಂಬಾತನಿಗೆ ಬಾಲಕನನ್ನು ಹೆದರಿಸಲು ಹೇಳಿದ್ದಳು. ಆತ ಒಂದೆರಡು ಬಾರಿ ಆತನಿಗೆ ಹೆದರಿಸಿದ್ದದರೂ ಬಾಲಕ ಮತ್ತು ಯುವತಿ ನಡುವಿನ ಪ್ರೀತಿ ಮುಂದುವರೆದಿತ್ತು.

ಇದರಿಂದ ಕುಪಿತಗೊಂಡ ಮೆಹಬೂಬ್, ತನ್ನ ಸ್ನೇಹಿತರ ಜೊತೆಗೂಡಿ ಬಾಲಕನನ್ನು ಅಪಹರಿಸಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಆ ಬಳಿಕ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ಹಾಕಿ ನರಿಬೋಳ-ಚಾಮನೂರ ಬಳಿಯ ಭೀಮಾ ನದಿಯ ಬ್ರಿಡ್ಜ್ ಕೆಳಗೆ ಶವ ಬಿಸಾಡಿದ್ದಾರೆ.

ಇತ್ತ ಗೆಳೆಯನ ಬರ್ತ್​ಡೇಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಬಾಲಕ ಎರಡು ದಿನಗಳು ಕಳೆದರೂ ಬಾರದಿದ್ದಾಗ ಆತನ ಪೊಷಕರು ಜೇವರ್ಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟದಲ್ಲಿರುವಾಗಲೇ ನರಿಬೋಳ ಬಳಿಯ ಭೀಮಾ ನದಿಯಲ್ಲಿ ಅಪರಿಚಿತ ಶವ ತೇಲಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಇದು ನಾಪತ್ತೆಯಾದ ಬಾಲಕನ ಶವ ಎಂದು ತಿಳಿದಿದೆ.

ಓದಿ: ಮನದಲ್ಲಿ ನೋವು, ಮುಖದಲ್ಲಿ ನಗು.. ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ

ಪ್ರಕರಣ ಬೆನ್ನಟ್ಟಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರೀತಿಯ ವಿಷಯವಾಗಿ ಬಾಲಕನ ಕೊಲೆ ಮಾಡಿರುವುದು ಬೆಳಿಕಿಕೆ ಬಂದಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.