ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ನಗರದ 11 ಕಡೆ ಮೈಕ್ರೋ ಕಂಟೈನ್‌ಮೆಂಟ್ ವಲಯ ಸ್ಥಾಪನೆ ಮಾಡಿದೆ.
ನಗರದ ಸಂಗಮೇಶ್ವರ ಕಾಲೋನಿ ಸೇರಿದಂತೆ ಕೊರೊನಾ ಸೋಂಕಿತರು ಹೆಚ್ಚಾಗಿರುವ ಹನ್ನೊಂದು ಪ್ರದೇಶಗಳನ್ನು ಈ ರೀತಿ ನಿರ್ಬಂಧಿತ ವಲಯವೆಂದು ಘೊಷಿಸಲಾಗಿದೆ.
ಸೋಂಕಿತರ ನಿವಾಸದ ಮುಂದಿನ ರಸ್ತೆಗಳನ್ನು ಸೀಲ್ಡೌನ್ ಮಾಡಿ, ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ರೈತರು-ಪೊಲೀಸರ ಮಧ್ಯೆ ವಾಗ್ವಾದ: 30ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ