ಕಲಬುರಗಿ: ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ಭೀಮಾ ನದಿಯಲ್ಲಿ ಪ್ರವಾಹ ಇಳಿಮುಖದತ್ತ ಸಾಗಿದೆ. ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ 1.50 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.
ಪ್ರವಾಹ ಇಳಿಮುಖವಾಗಿರೋದ್ರಿಂದ ಸಂತ್ರಸ್ತರು ಮನೆಗಳತ್ತ ಮುಖ ಮಾಡಿದ್ದಾರೆ. ಮನೆಗಳ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿ ಸಂಗ್ರಹಗೊಂಡಿರುವ ರಾಡಿ ತೆಗೆದು, ಮನೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಜೊತೆಗೆ ಎತ್ತರದ ಪ್ರದೇಶಕ್ಕೆ ಕೊಂಡೊಯ್ದಿದ್ದ ಸಾಮಾನುಗಳನ್ನು ವಾಪಸ್ ತರುತ್ತಿದ್ದಾರೆ. ಸದ್ಯ ಭೀಮಾ ನದಿಯಲ್ಲಿ ಪ್ರವಾಹ ಗಣನೀಯ ಇಳಿಕೆಯಾಗಿದೆ. ಆದರೆ ಪ್ರವಾಹದಿಂದಾಗಿ ಮನೆ ಜಮೀನುಗಳಿಗೆ ನೀರು ಹೊಕ್ಕು ಜನತೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಇನ್ನೂ ಮೊಳಕೆ ಬಂದಿರೋ ದವಸ ಧಾನ್ಯಗಳನ್ನು ಒಣಗಿ ಹಾಕಿದ್ದು, ಕೊಚ್ಚಿ ಹೋದ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.