ಹಾವೇರಿ: ಜಿಲ್ಲೆಯ ಹಾವನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನನ್ನು ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಸೊರಣಗಿ ಗ್ರಾಮದ ಮಂಜುನಾಥ ಕಾಸಿಕೋವಿ (19) ವರ್ಷ ಎಂದು ಗುರುತಿಸಲಾಗಿದೆ. ಹಾವನೂರು ಗ್ರಾಮದ ಜಾತ್ರೆಗೆ ಬಂದಿದ್ದ ಮಂಜುನಾಥ, ಸ್ನಾನಕ್ಕೆಂದು ತುಂಗಾಭದ್ರಾ ನದಿಗೆ ಇಳಿದ ವೇಳೆ ನೀರು ಪಾಲಾಗಿದ್ದ. ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ನದಿಯಲ್ಲಿ ಹುಡುಕಾಟ ನಡೆಸಿ ಯುವಕನ ಮೃತದೇಹ ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಹಾವೇರಿ ತಹಶೀಲ್ದಾರ್ ಶಂಕರ ಹಾಗೂ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.