ಹಾವೇರಿ: ಸಿ.ಎಂ.ಯಡಿಯೂರಪ್ಪ ಸರ್ಕಾರ ಪೂರ್ಣಾವಧಿ ಸರ್ಕಾರವಾಗುವುದಿಲ್ಲ. ಇದು ನಾಲ್ಕೈದು ತಿಂಗಳಲ್ಲಿ ಬಿದ್ದು ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಭವಿಷ್ಯ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, 2020ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಲ್ಲಿರುವುದು ಸಿ.ಎಂ.ಯಡಿಯೂರಪ್ಪ ಮಾತ್ರ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿ ಇಷ್ಟು ದಿನಗಳಾದರು ಸಚಿವ ಸಂಪುಟ ರಚನೆ ಆಗಿಲ್ಲಾ. ತಮ್ಮ ಪಕ್ಷದ 105 ಜನ ಮತ್ತು ಅತೃಪ್ತಶಾಸಕರೆಲ್ಲರಿಗೂ ಸಚಿವ ಸ್ಥಾನ ಹಂಚುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಇನ್ನು ನಾಲ್ಕೈದು ತಿಂಗಳಲ್ಲಿ ಬಿ.ಎಸ್.ವೈ ಸರ್ಕಾರ ಬೀಳುತ್ತೆ ಎಂದು ಕೋಳಿವಾಡ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದರು.