ETV Bharat / state

ರಾಣೆಬೆನ್ನೂರು: ಕೊರೊನಾ ನಡುವೆಯೂ ವರಮಹಾಲಕ್ಷ್ಮಿ ಹಬ್ಬ ಆಚರಣೆ

author img

By

Published : Jul 31, 2020, 3:47 PM IST

ರಾಣೆಬೆನ್ನೂರು ಜನತೆ ತಮ್ಮ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ, ಆಭರಣ, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.

Varamahalakshmi worship in ranebennuru
Varamahalakshmi worship in ranebennuru

ರಾಣೆಬೆನ್ನೂರು: ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನಡೆಯುವ ವರಮಹಾಲಕ್ಷ್ಮಿ ಪೂಜೆಯನ್ನು ಭಕ್ತರು ಸಂಭ್ರಮದಿಂದ ಆಚರಿಸಿದ್ದಾರೆ.

ತಾಲೂಕಿನ ಜನತೆ ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ, ಆಭರಣ, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಈ ಹಬ್ಬದ ಸಮಯದಲ್ಲಿ ಮಹಿಳೆಯರು ವಿಶೇಷವಾಗಿ ಉಪವಾಸ ವ್ರತ ಕೈಗೊಂಡು ಮಹಾಲಕ್ಷ್ಮಿಗೆ ಭಕ್ತಿ ಅರ್ಪಿಸುತ್ತಾರೆ. ಸಂಜೆ ಸಮಯದಲ್ಲಿ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡುವುದರ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮಿ ರೂಪವನ್ನು ಕಾಣುತ್ತಾರೆ. ಅದರಂತೆ ರಾಣೆಬೆನ್ನೂರು ಜನತೆ ಹಬ್ಬ ಆಚರಿಸಿದ್ದಾರೆ.

ಹಬ್ಬದ ದಿನ ಗಗನಕ್ಕೇರಿದ ಹೂವಿನ ಬೆಲೆ:
ವರಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಅತ್ಯಗತ್ಯ ವಸ್ತುಗಳಲ್ಲೊಂದಾದ ಹೂವಿನ ಬೆಲೆ ಗಗನಕ್ಕೇರಿದೆ. ಸೇವಂತಿಗೆ ಕೆಜಿಗೆ 400ರಿಂದ 500 ರೂ.ವರಗೆ ಮಾರಾಟವಾಗಿದೆ. ಇನ್ನುಳಿದಂತೆ ಚೆಂಡು ಹೂವು, ಮಲ್ಲಿಗೆ, ಪಾರಿಜಾತ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.