ಹಾವೇರಿ : ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಇಲಾಖೆಯ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ.
ನಿರ್ವಾಹಕ ಬಸವರಾಜ್ ಮತ್ತು ಚಾಲಕ ರೆಹಮಾನ್ ಹಲ್ಲೆಗೊಳಗಾದ ಸಾರಿಗೆ ನೌಕರರು.
ಅಗಡಿ ಗ್ರಾಮದಿಂದ ಹಾವೇರಿಗೆ ಬರುತ್ತಿದ್ದ ವೇಳೆ ಟಿಕೆಟ್ ನೀಡುವ ವಿಚಾರ ಕುರಿತಂತೆ ಆರಂಭವಾದ ಜಗಳ ಅತಿರೇಕಕ್ಕೇರಿ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಚಾಲಕ ಮತ್ತು ನಿರ್ವಾಹಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಧ್ಯೆ ಕರ್ತವ್ಯನಿರತ ಚಾಲಕ ಮತ್ತು ನಿರ್ವಾಹಕರ ಮೇಲಿನ ಹಲ್ಲೆ ಖಂಡಿಸಿ ಹಾವೇರಿ ವಿಭಾಗದ ಸಾರಿಗೆ ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.