ಹಾವೇರಿ : 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ಈ ಮಧ್ಯೆ ಸಾರಿಗೆ ನೌಕರರ ಮುಷ್ಕರ ರೈಲು ಪ್ರಯಾಣಿಕರ ಸಂಖ್ಯೆ ಅಧಿಕಗೊಳಿಸಿದೆ.
ಹಾವೇರಿ ಸೇರಿ ಉತ್ತರಕರ್ನಾಟಕದ ಬಹುತೇಕ ಜನ ಬಸ್ ತೊರೆದು ಇದೀಗ ರೈಲುಗಳಲ್ಲಿ ಪಯಣಿಸುತ್ತಿದ್ದಾರೆ. ಇದರಿಂದಾಗಿ ರೈಲುಗಳಲ್ಲಿ ಜನದಟ್ಟಣೆಯಿದೆ. ಪ್ರಯಾಣಿಕ ರೈಲುಗಳಿಲ್ಲದ ಕೇವಲ ಎಕ್ಸ್ಪ್ರೆಸ್ ಟ್ರೈನ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ಇದಕ್ಕೆ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕು.
ಇದು ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿ ಎನಿಸಿದೆ. ದೂರದೂರದ ಊರುಗಳಿಗೆ ಪಯಣಿಸುವವರು ಬುಕ್ಕಿಂಗ್ ಮಾಡುತ್ತಾರೆ. ಸಮೀಪದ ಸ್ಟೇಷನ್‌ಗಳಿಗೆ ಪಯಣಿಸಲು ಬುಕ್ಕಿಂಗ್ ಮಾಡುವುದು ಪ್ರಯಾಣಿಕರಿಗ ಬೇಸರ ತರಿಸಿದೆ. ಸಾರಿಗೆ ಬಸ್‌ಗಳ ಆರಂಭವಾಗುವವರೆಗೆ ಹೆಚ್ಚಿನ ಹಾಗೂ ವಿಶೇಷ ರೈಲುಗಳ ಸೇವೆ ನೀಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.