ದಾವಣಗೆರೆ/ಹಾವೇರಿ: ಜಿಲ್ಲೆಯಲ್ಲಿ ಇಂದಿನ ಕೊರೊನಾ ವರದಿಯ ಸಂಪೂರ್ಣ ಅಂಕಿ-ಅಂಶಗಳು ಈ ಕೆಳಗಿನಂತಿವೆ.
![Today Corona Report of Davangere and Haveri Districts](https://etvbharatimages.akamaized.net/etvbharat/prod-images/kn-dvg-07-17-covid-disharge-script-7203307_17102020191422_1710f_1602942262_295.png)
ದಾವಣಗೆರೆ: ಜಿಲ್ಲೆಯಲ್ಲಿಂದು 41 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 195 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ದಾವಣಗೆರೆ 18, ಹರಿಹರ 9, ಚನ್ನಗಿರಿ 6, ಹೊನ್ನಾಳಿಯಲ್ಲಿ 8 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ದಾವಣಗೆರೆ 83, ಹರಿಹರ 38, ಜಗಳೂರು 11, ಚನ್ನಗಿರಿ 27, ಹೊನ್ನಾಳಿ 31, ಅಂತರ್ ಜಿಲ್ಲೆಯ ಐವರು ಸೇರಿದಂತೆ ಒಟ್ಟು 195 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
45 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 251ಕ್ಕೇರಿದೆ. ಒಟ್ಟು 19,180 ಸೋಂಕಿತರಿದ್ದು, 17,694 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1235 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಮುಂದುವರಿದಿದೆ.
ಹಾವೇರಿ:
![Today Corona Report of Davangere and Haveri Districts](https://etvbharatimages.akamaized.net/etvbharat/prod-images/kn-dvg-07-17-covid-disharge-script-7203307_17102020191422_1710f_1602942262_179.png)
ಜಿಲ್ಲೆಯಲ್ಲಿಂದು 58 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 10,016 ಕ್ಕೇರಿದೆ.
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಶನಿವಾರ 41 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲಾಡಳಿತ ಎರಡು ಮರಣ ದೃಢೀಕರಿಸಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 182 ಕ್ಕೇರಿದಂತಾಗಿದೆ.
461 ಜನ ಹೋಂ ಐಸೋಲೇಷನ್‌ಲ್ಲಿದ್ದು, 138 ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡಗಿ 04, ಹಾನಗಲ್ 18, ಹಾವೇರಿ 13, ಹಿರೇಕೆರೂರು 08, ರಾಣೆಬೆನ್ನೂರು 12, ಸವಣೂರು ತಾಲೂಕಿನಲ್ಲಿ 03 ಕೊರೊನಾ ದೃಢಪಟ್ಟಿದೆ.