ETV Bharat / state

ಜಾಗೃತಿಗೆ ಬಂದ ಪೊಲೀಸರ ಮೇಲೆ ಹಲ್ಲೆ ಮಾಡಿದ ಜನ: ಪೆಟ್ಟುಕೊಟ್ಟವರಿಗೆ ಕೇಸಿನೇಟು

ಕೊರೊನಾ ಸೋಂಕು ಹರಡೋದನ್ನ ತಡೆಯೋ ಸಂಬಂಧ ಜಾಗೃತಿ ಮೂಡಿಸಲು ತೆರಳಿದ್ದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಸಿಪಿಐ ಹಾಗೂ ಅರು ಜನ ಪೊಲೀಸರ ಮೇಲೆ ಹಲ್ಲೆ ಮಾಡಿರೋ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆಗ್ಗೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಂಪಾಗಿ ಕೂರಬೇಡಿ ಅಂತಾ ಕಣವಿ ಕುಟುಂಬದವರಿಗೆ ಅಧಿಕಾರಿ ಮತ್ತು ಪೊಲೀಸರು ತಿಳಿ ಹೇಳಿದ್ದಾರೆ. ಈ ವೇಳೆ, ಸಿಟ್ಟಿಗೆದ್ದ ಕುಟುಂಬದ ನಾಲ್ಕೈದು ಜನ ಪೊಲೀಸರ ಮೇಳೆ ಹಲ್ಲೆ ಮಾಡಿದ್ದಾರೆ

The people who assaulted the police who had come to the Corona AwarenessThe people who assaulted the police who had come to the Corona Awareness
ಕೊರೊನಾ ಜಾಗೃತಿಗೆ ಬಂದಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ ಜನ
author img

By

Published : Apr 15, 2020, 11:50 PM IST

ಹಾವೇರಿ ಕೊರೊನಾ ಸೋಂಕು ಹರಡೋದನ್ನ ತಡೆಯೋ ಸಂಬಂಧ ಜಾಗೃತಿ ಮೂಡಿಸಲು ತೆರಳಿದ್ದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಸಿಪಿಐ ಹಾಗೂ ಅರು ಜನ ಪೊಲೀಸರ ಮೇಲೆ ಹಲ್ಲೆ ಮಾಡಿರೋ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆಗ್ಗೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ತಾಲೂಕು ಪಂಚಾಯ್ತಿ ಇಓ ಮುನಿಯಪ್ಪ, ಓರ್ವ ಪೇದೆ ಹಾಗೂ ಗೃಹರಕ್ಷಕ ದಳದ‌ ಓರ್ವ ಸಿಬ್ಬಂದಿ ಜಾಗೃತಿ ಮೂಡಿಸಲು ತೆರಳಿದ್ರು. ಈ ವೇಳೆ, ಗ್ರಾಮದ ಚಮನ್ ಸಾಬ ಕಣವಿ ಕುಟುಂಬದ ಸದಸ್ಯರು ಮನೆಯ ಹೊರಗಡೆ ಗುಂಪು ಗುಂಪಾಗಿ ಕುಳಿತುಕೊಂಡಿದ್ರಂತೆ.

ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಗುಂಪಾಗಿ ಕೂರಬೇಡಿ ಅಂತಾ ಕಣವಿ ಕುಟುಂಬದವರಿಗೆ ಅಧಿಕಾರಿ ಮತ್ತು ಪೊಲೀಸರು ತಿಳಿ ಹೇಳಿದ್ದಾರಂತೆ.

ಇದ್ರಿಂದ ಕೆರಳಿದ ಕಣವಿ ಕುಟುಂಬದವರು ನೀವೇನ್ ನಮಗೆ ಜಾಗೃತಿ ಹೇಳೋದು ಅಂತಾ ಅವಾಚ್ಯವಾಗಿ ನಿಂದಿಸಿ ಅಧಿಕಾರಿ ಮತ್ತು ಪೊಲೀಸರ ಮೇಲೆ ಹಲ್ಲೆ‌ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಶಶಿಧರ ಹಾಗೂ ನಾಲ್ಕೈದು ಜನ ಪೊಲೀಸರ‌ ಮೇಲೆ ಹಲ್ಲೆ‌ ಮಾಡಿದ್ದಾರಂತೆ.

ಪೊಲೀಸರಿಗೆ ಕೈ, ಕಾಲು ಮತ್ತು ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಹಲ್ಲೆ ಮಾಡಿದ ಆರೋಪದ ಮೇಲೆ ಈಗಾಗಲೆ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದಿದ್ದಾರೆ. ಕಣವಿ ಕುಟುಂಬದ ಹತ್ತಕ್ಕೂ ಅಧಿಕ‌ ಜನರ ಮೇಲೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.