ಹಾವೇರಿ: ಜಿಲ್ಲೆಯಲ್ಲಿ ನಾಳೆಯಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಸೂಚನೆ ನೀಡಿದ ಹಿನ್ನೆಲೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಲಾಕ್ಡೌನ್ ನಂತರ ಸ್ಥಗಿತಗೊಂಡಿದ್ದ ಮದ್ಯದ ಅಂಗಡಿಗಳು ನಾಳೆಯಿಂದ ತೆರೆಯುತ್ತಿದ್ದು, ಜನದಟ್ಟನೆ ನಿಯಂತ್ರಿಸಲು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಕೆಲವೆಡೆ ಬ್ಯಾರಿಕೇಡ್ಗಳನ್ನ ಹಾಕಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 24 ಎಂಎಸ್ಐಎಲ್ ಅಂಗಡಿಗಳಿದ್ದು, ಬಹುತೇಕ ಎಂಎಸ್ಐಎಲ್ ಅಂಗಡಿಗಳ ಮುಂದೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರ ಸೇರಿದಂತೆ ಜಿಲ್ಲೆಯಲ್ಲಿನ 9 ಸಿಎಲ್2 ಅಂಗಡಿಗಳ ಮುಂದೆಯು ಸಿದ್ಧತೆ ನಡೆದಿದೆ. ಮದ್ಯದ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವವರು ಮಾಸ್ಕ್ ಧರಸಿ, ಗ್ಲೌಸ್ ಬಳಸಬೇಕು ಎಂದು ಸೂಚಿಸಿದೆ. ಇಲ್ಲವಾದರೇ ದಂಡ ವಿಧಿಸಲಾಗುವುದು ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಬೆಳಿಗ್ಗೆ 9ರಿಂದ ಸಂಜೆ 7ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಿದ್ದು, ಒಬ್ಬರಿಗೆ 2.3 ಲೀಟರ್ ಮದ್ಯ ನೀಡಲು ಅಬಕಾರಿ ಇಲಾಖೆ ಅವಕಾಶ ನೀಡಿದೆ. ಇನ್ನೂ ಮದ್ಯವನ್ನ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಮಾಡುವಂತಿಲ್ಲ ಎಂದು ಅಬಕಾರಿ ಇಲಾಖೆ ಸೂಚಿಸಿದೆ.