ರಾಣೆಬೆನ್ನೂರು: ಮಾಸ್ಕ್ ಹಾಕಿಕೊಳ್ಳಿ ಎಂದು ಪೊಲೀಸರು ಹೇಳಿದ್ದಕ್ಕೆ ಬೈಕ್ ಸವಾರನೊಬ್ಬ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿರುವ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.
ನಗರದ ಶಹರ ಠಾಣೆಯ ಹತ್ತಿರ ಪೊಲೀಸರು ಮಾಸ್ಕ್ ಹಾಕದ ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಆ ವ್ಯಕ್ತಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೆರಳಿದ ಪೊಲೀಸರು ಸರ್ಕಾರದ ಆದೇಶ ಪ್ರಕಾರ ದಂಡ ವಸೂಲಿ ಮಾಡಲಾಗುತ್ತಿದೆ. ಜನರ ಆರೋಗ್ಯ ದೃಷ್ಟಿಯಿಂದ ಇದನ್ನು ಮಾಡಲಾಗದೇ? ಎಂದು ಆ ವ್ಯಕ್ತಿಗೆ ವಿವರಿಸಿದರು.
ಕೊರೊನಾ ಎರಡನೇ ಅಲೆ ಜೋರಾಗಿದೆ. ಸರ್ಕಾರ ಈಗಾಗಲೇ ಕೊರೊನಾ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ರಾಣೆಬೆನ್ನೂರು ನಗರದಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳದೆ ಇರುವುದು ಕಂಡುಬಂದಿದೆ. ಈ ಬಗ್ಗೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದ್ರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.
ಇದನ್ನೂ ಓದಿ: ಮಾಸ್ಕ್ ಹಾಕದವರಿಗೆ 1,000 ರೂ. ದಂಡ ಹಾಕಿ: ತೆಲಂಗಾಣ ಸಿಎಂ ಆದೇಶ