ಹಾವೇರಿ: ರಾಜ್ಯ ಬಿಜೆಪಿ ಸರ್ಕಾರ ಶಿರದಿಂದ ಪಾದದವರೆಗೆ ಭ್ರಷ್ಟಾಚಾರದಿಂದ ತುಂಬಿದೆ ಎಂದು ರಾಜ್ಯ ಕಾಂಗ್ರೆಸ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಆರೋಪಿಸಿದರು. ಜಿಲ್ಲಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಮಾಡುತ್ತಿದೆ ಎಂದು ಸುರ್ಜೆವಾಲಾ ತಿಳಿಸಿದರು. ಜಾತಿ ಧರ್ಮವನ್ನು ಮೀರಿ ಕಾಂಗ್ರೆಸ್ ಪ್ರತಿ ಕುಟುಂಬದ ಯಜಮಾನಿಗೆ ಎರಡುಸಾವಿರ ರೂಪಾಯಿ ನೀಡುವ ಯೋಜನೆ ರೂಪಿಸಿದೆ. ಅದೇ ರೀತಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆ ಮತ್ತು ಪ್ರತಿ ಬಿಪಿಎಲ್ ಸದಸ್ಯನಿಗೆ ತಲಾ 10 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ತರಲಿದೆ ಎಂದು ಸುರ್ಜೆವಾಲಾ ತಿಳಿಸಿದರು.
ಬಿಜೆಪಿಯನ್ನು ಭ್ರಷ್ಟ ಜನತಾ ಪಾರ್ಟಿ : ಒಂದು ಕಡೆ ಜನಪರ ಕಾಂಗ್ರೆಸ್ ಇದೆ ಇನ್ನೊಂದು ಕಡೆ ಬಿಜೆಪಿ ಇದೆ. ಬಿಜೆಪಿಯ ಹೆಸರನ್ನ ಭಾರತೀಯ ಜನತಾ ಪಾರ್ಟಿ ಎನ್ನುವ ಬದಲು ಭ್ರಷ್ಟ ಜನತಾ ಪಾರ್ಟಿ ಎನ್ನಬೇಕು ಎಂದು ಸುರ್ಜಿವಾಲಾ ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರವನ್ನ ಭ್ರಷ್ಟಾಚಾರ ಸರ್ಕಾರ ಎನ್ನಬೇಕು. ಭ್ರಷ್ಟ ಬೊಮ್ಮಾಯಿ ಸರ್ಕಾರ ಎನ್ನಬೇಕು ಎಂದು ಸುರ್ಜಿವಾಲಾ ಆರೋಪಿಸಿದರು. ಬೊಮ್ಮಾಯಿಗೆ ಕಳೆದ ನಾಲ್ಕು ದಿನದಿಂದ ತಮ್ಮದೆ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಲಾಗುತ್ತಿಲ್ಲ. ತಮ್ಮ ಶಾಸಕನ ಬಂಧಿಸದ ಸರ್ಕಾರ ಇನ್ನು ಕ್ರಿಮಿನಲ್ಗಳನ್ನು ಹೇಗೆ ಹಿಡಿಯುತ್ತೆ ಎಂದು ಸುರ್ಜೆವಾಲಾ ಆರೋಪಿಸಿದರು. ಇದರಿಂದ ಗೊತ್ತಾಗುತ್ತೆ ಬೊಮ್ಮಾಯಿ ಸರ್ಕಾರ ಅಪರಾಧಿಗಳ ಪರವಾಗಿದೆ ಎಂದು ಸುರ್ಜೆವಾಲಾ ಆರೋಪಿಸಿದರು.
ಇದನ್ನೂ ಓದಿ: ಶಾಸಕ ವಿರೂಪಾಕ್ಷಪ್ಪ ಮಾಡಾಳ್ಗೆ ನೋಟಿಸ್ ಜಾರಿಗೊಳಿಸಲು ಲೋಕಾಯುಕ್ತ ಸಿದ್ಧತೆ
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ
ಮೈಸೂರು ಸ್ಯಾಂಡಲ್ ಮಾರ್ಜಕ ಕಂಪನಿ ಸ್ಕ್ಯಾಮ ಹಣ ಮೇಲಿನ ನಾಯಕರಿಗೆ ಹೋಗುತ್ತದೆ ಹೀಗಾಗಿ ಅಕ್ರಮದಲ್ಲಿರುವ ಬಿಜೆಪಿ ನಾಯಕರ ಬಂಧನವಾಗುತ್ತಿಲ್ಲ ಎಂದು ಸುರ್ಜೆವಾಲಾ ಆರೋಪಿಸಿದರು. ಬೊಮ್ಮಾಯಿ ಪ್ರತಿಬಾರಿ 40 ಪರ್ಸೆಂಟ್ ಆರೋಪ ಮಾಡಿದಾಗ ದಾಖಲಾತಿ ಕೊಡಿ ಎನ್ನುತ್ತಿದ್ದರು. ಈಗ ಲೋಕಾಯುಕ್ತವೇ ಅಕ್ರಮವಾದ 8 ಕೋಟಿ ರೂಪಾಯಿ ವಶಪಡಿಸಿಕೊಳ್ಳುವ ಮೂಲಕ ದಾಖಲೆ ನೀಡಿದೆ ಎಂದು ಸುರ್ಜೆವಾಲಾ ಆರೋಪಿಸಿದರು. ಬಿಜೆಪಿ ಈಗ ಹೇಳಲಿ ಬೊಮ್ಮಾಯಿ, ಜ್ಞಾನೇಂದ್ರ ಮತ್ತು ನಿರಾಣಿ ಯಾವಾಗ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಾರೆ, ಮಾಡಾಳ್ ವಿರೂಪಾಕ್ಷಪ್ಪನನ್ನ ಯಾವಾಗ ಬಂಧಿಸುತ್ತಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದರು. ಇದರಿಂದ ಗೊತ್ತಾಗುತ್ತೆ ಬೊಮ್ಮಾಯಿ ತಲೆಯಿಂದ ಪಾದದವರೆಗೆ ಭ್ರಷ್ಟಚಾರದಿಂದ ಮುಳುಗಿದ್ದಾರೆ ಎಂದು ಸುರ್ಜೆವಾಲಾ ಆರೋಪ ಮಾಡಿದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ: ಅಪ್ಪ, ಮಗನ ಕೋಟಿ ಕೋಟಿ ಹಣದ ತನಿಖೆ ಚುರುಕು
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ: ಸಿದ್ದರಾಮಯ್ಯ