ETV Bharat / state

ಪೊಲೀಸರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ: ಬಿ ಸಿ ಪಾಟೀಲ್​ ಎಚ್ಚರಿಕೆ

ಜಿಲ್ಲಾಸ್ಪತ್ರೆಯಲ್ಲಿನ ಕೊರೊನಾ ವಾರ್ಡ್ ವ್ಯವಸ್ಥೆ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿ ಜೊತೆ ಸಚಿವ ಬಿ ಸಿ ಪಾಟೀಲ್​ ಚರ್ಚಿಸಿದ್ರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ಸುಕತೆಯಿಂದ ಕೆಲಸ ಮಾಡ್ತಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಗೆ ಕೋಟಿ ಕೋಟಿ ನಮನ ಅಂತಾ ಹೇಳಿದ್ರು.

ಬಿ ಸಿ ಪಾಟೀಲ್​
ಬಿ ಸಿ ಪಾಟೀಲ್​
author img

By

Published : Mar 26, 2020, 8:28 PM IST

ಹಾವೇರಿ: ಜಿಲ್ಲಾಸ್ಪತ್ರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್​ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಟಾಸ್ಕ್ ಫೋರ್ಸ್ ಹೇಗೆ ಕೆಲಸ ಮಾಡ್ತಿದೆ ಅನ್ನೋದನ್ನು ಪರಿಶೀಲಿಸಿದ್ರು.

ಜಿಲ್ಲಾಸ್ಪತ್ರೆಯಲ್ಲಿನ ಕೊರೊನಾ ವಾರ್ಡ್ ವ್ಯವಸ್ಥೆ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿ ಜೊತೆಗೆ ಚರ್ಚಿಸಿದ್ರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಉತ್ಸುಕತೆಯಿಂದ ಕೆಲಸ ಮಾಡ್ತಿದ್ದು, ಅವರಿಗೆ ಕೋಟಿ ಕೋಟಿ ನಮನ ಎಂದರು.

ಜನರು ಯಾವುದೇ ರೀತಿಯಿಂದ ಹೆದರೋದು ಬೇಡ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಮ್ಮೊಂದಿಗಿವೆ. ಯಾವುದಕ್ಕೂ ಹೆದರಬೇಡಿ. ಪ್ರಧಾನಿ ಕರೆಕೊಟ್ಟಿರುವ ಭಾರತ ಲಾಕ್ ಡೌನ್ ಗೆ ಎಲ್ಲರೂ ಸಹಕಾರ ಕೊಡಿ. ಯಾರೂ ಮನೆ ಬಿಟ್ಟು ಹೊರಗೆ ಓಡಾಡಬೇಡಿ. ಪೊಲೀಸರು ಲಾಠಿ ರುಚಿ ತೋರಿಸಿದ ಮೇಲೆ ಮನೆಗೆ ಹೋಗೋದು ಬೇಡ. ಮನೆಯಿಂದ ಹೊರಗೆ ಬರದಂತೆ ನಿಮ್ಮಷ್ಟಕ್ಕೆ ನೀವೇ ನಿರ್ಬಂಧ ಹಾಕಿಕೊಳ್ಳಿ. ಜೊತೆಗೆ ಪೊಲೀಸರ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಸಬೇಡಿ ಎಂದರು.

ನಿನ್ನೆ ಬೆಂಗಳೂರಲ್ಲಿ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿರೋದು ಖಂಡನೀಯ. ಈಗಾಗಲೇ ಅಂತವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಯಾರೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ರವಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.