ಹಾವೇರಿ : ನಗರದಲ್ಲಿ ಕುಸ್ತಿಕುಟಗಳನ್ನು ಸಿದ್ಧಪಡಿಸುತ್ತಿದ್ದ ಗರಡಿಮನೆಗಳು ಜಿಮ್ಗಳ ಹಾವಳಿಯಿಂದ ಮೂಲೆ ಗುಂಪಾಗಿವೆ. ಅದರಲ್ಲಿದ್ದ ಪರಿಕರಗಳೆಲ್ಲ ಮಾಯವಾಗುತ್ತಿದ್ದು, ಅವಸಾನದತ್ತ ಸಾಗುತ್ತಿವೆ.
ಒಂದು ಕಾಲದಲ್ಲಿ ಗ್ರಾಮ ಮತ್ತು ನಗರಗಳ ಯುವಜನತೆ ದೈಹಿಕ ಆರೋಗ್ಯಕ್ಕಾಗಿ ಗರಡಿ ಮನೆಗಳನ್ನು ಅವಲಂಬಿಸಿದ್ದರು. ಫೈಲ್ವಾನರು ಹುರಿಗೊಳ್ತಿದ್ದ ಗರಡಿಮನೆಗಳ ಸಂಖ್ಯೆ ಇದೀಗ ಇಳಿಮುಖವಾಗಿದೆ. ನಗರದಲ್ಲಿ ಎರಡು ಗರಡಿಮನೆಗಳಿದ್ದು, ಅದರಲ್ಲಿ ಒಂದನ್ನು ಕೆಡವಲಾಗಿದೆ.
ಇನ್ನೊಂದು ಗರಡಿಮನೆಯಿದ್ದ ಪರಿಕರಗಳೆಲ್ಲ ಮಾಯವಾಗಿವೆ. ಆಧುನಿಕ ವ್ಯಾಯಾಮದ ಪರಿಕರಗಳಿದ್ದು, ಅವುಗಳಿಂದ ಯುವಕರು ವೇಳೆ ಸಿಕ್ಕಾಗ ತಾಲೀಮು ನಡೆಸುತ್ತಾರೆ. ಅದನ್ನು ಬಿಟ್ಟರೆ ಗರಡಿಮನೆ ಹೆಸರಿಗೆ ಸೀಮಿತವಾಗಿದೆ ಅಂತಾರೆ ಸ್ಥಳೀಯರು.
ಎರಡು ವರ್ಷಗಳ ಹಿಂದೆ ಯುವಕರೆಲ್ಲ ಗರಡಿಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದೆವು. ಆದರೆ, ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿ ವ್ಯಾಯಾಮ ಮಾಡುವುದನ್ನು ಬಿಟ್ಟಿದ್ದೇವೆ. ಗರಡಿ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಸದೃಢರಾಗಿದ್ದೆವು. ಆದರೀಗ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡರು.
ಓದಿ: ವಿವಾದಾತ್ಮಕ ಹೇಳಿಕೆ: ಕೋಟಿ ಚೆನ್ನಯ್ಯರ ಗರಡಿಯಲ್ಲಿ ಜಗದೀಶ್ ಅಧಿಕಾರಿ ಕ್ಷಮೆಯಾಚನೆ !
ಒಂದು ಕಾಲದಲ್ಲಿ ಸ್ವಾಸ್ಥ್ಯ ಸಮಾಜ ಸದೃಢು ಯುವಕರ ಪಡೆಗಳನ್ನು ಗರಡಿಮನೆಗಳು ತಯಾರು ಮಾಡುತ್ತಿದ್ದವು. ಆದರೀಗ ಗರಡಿಮನೆಗಳ ಸಂಖ್ಯೆ ಇಳಿಮುಖವಾಗಿದೆ. ಜಿಮ್‌ಗಳತ್ತ ಯುವಕರು ಮುಖ ಮಾಡುತ್ತಿದ್ದಾರೆ. ಇತ್ತ ಸರ್ಕಾರ ಗಮನ ಹರಿಸಿ ಮೂಲೆ ಗುಂಪಾಗುತ್ತಿರುವ ಗರಡಿಮನೆಗಳನ್ನು ರಕ್ಷಿಸಬೇಕಾಗಿದೆ.