ರಾಣೆಬೆನ್ನೂರು: ಲೋಕಕಲ್ಯಾಣಾರ್ಥ ಮತ್ತು ಸಾಂಕ್ರಾಮಿಕ ರೋಗದ ಉಪಟಳದಿಂದ ದೇಶ ಮತ್ತು ಜನರನ್ನು ಪಾರು ಮಾಡುವ ಪ್ರಾರ್ಥಿಸಿ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿರುವ ಮೈಲಾರಲಿಂಗೇಶ್ವರನ ಸನ್ನಿಧಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು.
ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮತ್ತು ಅರ್ಚಕ ವಿರೂಪಾಕ್ಷ ಭಟ್ಟರು ಪೂಜೆಯ ನೇತೃತ್ವ ವಹಿಸಿದ್ದರು. ಪೂಜೆ ನೆರವೇರುತ್ತಿದ್ದಂತೆ ಮಂತ್ರಘೋಷಗಳು, ವಾದ್ಯ ನಾದ ಜೊತೆ ಜೊತೆಯಾಗಿ ಮೊಳಗಿದವು.