ಹಾನಗಲ್(ಹಾವೇರಿ): ದೇಶದ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ ನೀಡುತ್ತಿರುವ ಯೋಜನೆ ಸ್ವಾಗತಾರ್ಹ ಎಂದು ಹಾನಗಲ್ ಶಾಸಕ ಸಿ.ಎಂ.ಉದಾಸಿ ಅಭಿಮತ ವ್ಯಕ್ತಪಡಿಸಿದರು.
ಕೊರೊನಾದಿಂದ ಜಗತ್ತು ದಿಗ್ಭ್ರಮೆಗೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರದ ಈ ನಿರ್ಧಾರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ದೇಶದ ಸಣ್ಣ ಕೈಗಾರಿಕೆಗಳು, ಉದ್ಯಮಗಳಿಗೆ ಪುನರ್ಜನ್ಮ ನೀಡಿದಂತಾಗುತ್ತದೆ. ದೇಶದ ಜನತೆ ಸ್ವಾಲಂಬಿಗಳಾಗಬೇಕು ಎಂಬುದು ಅವರ ಮಹದಾಸೆಯಾಗಿದೆ ಎಂದರು.
ಕೋವಿಡ್-19 ಅನ್ನು ದೇಶದಿಂದ ನಿರ್ಮೂಲನೆ ಮಾಡಲು ನಾವೆಲ್ಲಾ ಒಮ್ಮತದಿಂದ ಸಹಕರಿಸಬೇಕು. ದೇಶ, ರಾಜ್ಯ ಸರ್ಕಾರಗಳ ಆದೇಶ ಪಾಲಿಸುತ್ತಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಾ ಬದುಕಬೇಕು ಎಂದು ಸಲಹೆ ಕೊಟ್ಟರು.