ETV Bharat / state

ಗರ್ಭಕೋಶ ಕತ್ತರಿ: ಸಂತ್ರಸ್ತ ಮಹಿಳೆಯರಿಂದ ಬೊಮ್ಮಾಯಿ ಮನೆಗೆ ಪಾದಯಾತ್ರೆ

ಹಣದ ದಾಹಕ್ಕಾಗಿ ಬಡ ಮಹಿಳೆಯರ, ಅವಿವಾಹಿತ ಮಹಿಳೆಯರನ್ನೂ ಬಿಡದೇ ಗರ್ಭಕೋಶಕ್ಕೆ ಕತ್ತರಿ ಹಾಕುತ್ತಿದ್ದ ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ಸರ್ಕಾರಿ ವೈದ್ಯ ಡಾ. ಶಾಂತ, ವಿರುದ್ಧ ಸಂತ್ರಸ್ತ ಮಹಿಳೆಯರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

Scissors to the Uterus: Victims hiking to CM Bommayi's Home
ಸಂತ್ರಸ್ತ ಮಹಿಳೆಯರಿಂದ ಬೊಮ್ಮಾಯಿ ಮನೆಗೆ ಪಾದಯಾತ್ರೆ
author img

By

Published : Apr 26, 2022, 12:16 PM IST

ಹಾವೇರಿ: ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿದ್ದ ಡಾ.ಶಾಂತನಿಂದ ಗರ್ಭಕೋಶ ಕಳೆದುಕೊಂಡಿದ್ದ ಮಹಿಳೆಯರಿಗೆ ಸರ್ಕಾರದಿಂದ 40 ಕೋಟಿ ಪರಿಹಾರ ಧನ ಮಂಜೂರಾಗಿತ್ತು. ಆದರೆ, ಆ ಹಣ ಸಂತ್ರಸ್ತರಿಗೆ ವಿತರಣೆಯಾಗದೇ ವಾಪಸ್​ ಸರ್ಕಾರಕ್ಕೆ ಹೋಗಿದ್ದು, ಇದರಿಂದ ಬೇಸತ್ತ ಮಹಿಳೆಯರು ಅದನ್ನು ಮತ್ತೆ ಮಂಜೂರುಗೊಳಿಸುವಂತೆ ಒತ್ತಾಯಿಸಿ ಶಿಗ್ಗಾವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಸಂತ್ರಸ್ತ ಮಹಿಳೆಯರಿಂದ ಬೊಮ್ಮಾಯಿ ಮನೆಗೆ ಪಾದಯಾತ್ರೆ

ಏನಿದು ಘಟನೆ: 8 ವರ್ಷಗಳ ಹಿಂದೆ ರಾಣೆಬೆನ್ನೂರು ತಾಲೂಕು ಆಸ್ಪತ್ರೆಗೆ ವಿವಿಧ ಕಾರಣಗಳಿಗಾಗಿ ಬರುತ್ತಿದ್ದ ಬಡ ಮಹಿಳೆಯರ ಗರ್ಭಕೋಶಕ್ಕೆ ಇಲ್ಲಿಯ ಸರ್ಕಾರಿ ವೈದ್ಯ ಡಾ.ಶಾಂತ ಕತ್ತರಿ ಹಾಕಿದ್ದಾನೆ. ಹಣದ ದಾಹಕ್ಕಾಗಿ ಈ ವೈದ್ಯ 1,522 ಮಹಿಳೆಯರ ಗರ್ಭಕೋಶವನ್ನು ಕಿತ್ತಿದ್ದಾರೆ. ಮದುವೆಯಾದ ಮಹಿಳೆಯರು ಮಾತ್ರವಲ್ಲದೇ ಮದುವೆಯಾಗದ ಮಹಿಳೆಯರ ಗರ್ಭಕೋಶವನ್ನೂ ಹಣಕ್ಕಾಗಿ ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲಿ ಯಾವುದೇ ಕಾಯಿಲೆಗೆ ಹೋದರೂ ಅವರ ಗರ್ಭಕೋಶಕ್ಕೆ ಕತ್ತರಿ ಬೀಳುತ್ತಿತ್ತು.

ಡಾ.ಶಾಂತ ವಿರುದ್ಧ ಮಹಿಳೆಯರು ಎಷ್ಟೇ ಹೋರಾಟ ಮಾಡಿದರೂ, ಅದಕ್ಕೆ ಇನ್ನೂ ಜಯ ಸಿಕ್ತಿಲ್ಲ. ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಜೀವವನ್ನೂ ಕಳೆದುಕೊಂಡಿದ್ದಾರೆ. ವಿಪರ್ಯಾಸ ಎಂದರೆ ಈ ಮಹಿಳೆಯರಿಗಾಗಿ ಸರ್ಕಾರ 40 ಕೋಟಿ ರೂಪಾಯಿ ಪರಿಹಾರ ಧನವನ್ನು ಬಿಡುಗಡೆ ಮಾಡಿತ್ತು. ಆದರೆ, ಸ್ಥಳೀಯ ಆರೋಗ್ಯ ಅಧಿಕಾರಿಗಳ ಅಸಹಕಾರದಿಂದ ಮಂಜೂರಾಗಿದ್ದ ಹಣವೂ ವಾಪಸ್ ಸರ್ಕಾರಕ್ಕೆ ಹೋಗಿದೆ. ಈ ಎಲ್ಲ ಕಾರಣಗಳಿಂದ ಬೇಸತ್ತ ಮಹಿಳೆಯರು ಇದೀಗ ಬೊಮ್ಮಾಯಿಯವರ ಮನೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ಸುಮಾರು 75 ಕೀಲೂಮೀಟರ್ ದೂರವನ್ನು ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಕ್ರಮಿಸಿ ನಂತರ ಸಿಎಂ ಮನೆಯ ಮುಂದೆ ಈ ಮಹಿಳೆಯರು ಪ್ರತಿಭಟನೆ ನಡೆಸಲಿದ್ದಾರೆ. ರಾಣೆಬೆನ್ನೂರು ನಗರದ ಗಣೇಶ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಇದೇ 27ರಂದು ಶಿಗ್ಗಾವಿಯ ಸಿಎಂ ಮನೆ ತಲುಪಲಿದೆ. ಅಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬರುವವರೆಗೆ ತಾವು ಕದಲುವದಿಲ್ಲ ಎಂದು ಈ ಮಹಿಳೆಯರು ದೃಢ ನಿರ್ಧಾರ ಮಾಡಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಮಾಡುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿಲ್ಲ. ಆದರೆ, ಈ ಹೋರಾಟದಲ್ಲಿ ಮಾತ್ರ ಸಿಎಂ ಬಸವರಾಜ್ ಬೊಮ್ಮಾಯಿ
ಕಡೆಯಿಂದ ತಾವು ನ್ಯಾಯ ಪಡೆಯವರೆಗೆ ಮರಳುವುದಿಲ್ಲ ಎಂದು ಈ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ತಮಗೆ ಸೂಕ್ತ ಪರಿಹಾರ ಸಿಗಬೇಕು ಮತ್ತು ಡಾ.ಶಾಂತ ಶಾಶ್ವತವಾಗಿ ವೈದ್ಯ ಸೇವೆ ಮಾಡದಂತೆ ಮಾಡಬೇಕು ಎಂದು ಈ ಮಹಿಳೆಯರು ಆಗ್ರಹಿಸಿದ್ದಾರೆ.

ಇಷ್ಟು ದಿನದ ಹೋರಾಟ ಒಂದು ತೆರೆನಾದರೆ ಇದೀಗ ಈ ಮಹಿಳೆಯರ ಹೋರಾಟ ತೀವ್ರಗೊಂಡಿದ್ದು, ಇವರ ಹೋರಾಟಕ್ಕೆ ರೈತಸಂಘಟನೆಗಳು ಸಹ ಬೆಂಬಲ ನೀಡಿವೆ. ಈ ಬಾರಿಯಾದರು ಈ ಮಹಿಳೆಯರಿಗೆ ನ್ಯಾಯ ಸಿಗಲಿದಿಯಾ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಸಂತಾನಕ್ಕಾಗಿ ನೀಡಿದ ನಕಲಿ ಚಿಕಿತ್ಸೆಗೆ ಮಹಿಳೆ ಬಲಿ.. ವೈದ್ಯ ದಂಪತಿಯ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.