ಹಾವೇರಿ : ಜಿಲ್ಲೆಯಲ್ಲಿ ಈವರೆಗೆ ಮೂರು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೀಗಾಗಿ ಮನೆ ಮನೆ ಸಮೀಕ್ಷೆ ಸೇರಿದಂತೆ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸೋಮವಾರ ಪಿ. 853 ರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹದಿನಾಲ್ಕು ಜನರ ಸ್ಯಾಂಪಲ್ಸ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದುವರೆಗೆ ಸ್ಯಾಂಪಲ್ಸ್ ಕಳುಹಿಸಿದ ಒಟ್ಟು 88 ಜನರ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಸ್ಯಾಂಪಲ್ಸ್ ಕಳುಹಿಸಿದ 88 ಜನರ ಪೈಕಿ ಯಾರಿಗೂ ಕೊರೊನಾ ಗುಣಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈಗಾಗಲೆ ಪಿ.639 ಮತ್ತು ಪಿ.672 ರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ವರದಿಗಳು ನೆಗಟಿವ್ ಬಂದಿವೆ.