ರಾಣೆಬೆನ್ನೂರು (ಹಾವೇರಿ): ಕೊರೊನಾ ನಡುವೆ ತಮ್ಮ ಸ್ವಂತ ಊರುಗಳಿಗೆ ಹಾಗೂ ಬೇರೆ ಜಿಲ್ಲೆಗೆ ತೆರಳಲು ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಜನ ಸಾಮಾಜಿಕ ಅಂತರ ಮರೆತು ಪಾಸ್ ಪಡೆಯಲು ಮುಗಿಬಿದ್ದ ಘಟನೆ ನಡೆದಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನೆರೆ ಜಿಲ್ಲೆಗೆ ತೆರಳಲು ಮತ್ತು ಸಂಬಂಧಿಕರ ಮರಳಿ ಕರೆಸಿಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ತಾಲೂಕು ಆಡಳಿತದ ಮೂಲಕ ಅನುಮತಿ ಪಾಸ್ ನೀಡಲಾಗುತ್ತಿದೆ. ಈ ಅನುಮತಿ ಪಾಸ್ ಪಡೆಯಲು ನಗರ ಸೇರಿದಂತೆ ತಾಲೂಕಿನ ಜನರು ಕಳೆದ ಮೂರು ದಿನಗಳಿಂದ ತಹಶೀಲ್ದಾರ್ ಕಚೇರಿಯಲ್ಲಿ ಸರದಿ ನಿಲ್ಲುತ್ತಿದ್ದಾರೆ.
ಆದರೆ ಇಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಪಾಸ್ ಪಡೆಯಲು ನಿಂತಿರುವುದು ಕಂಡುಬರುತ್ತಿದೆ. ಸದ್ಯ ಹಾವೇರಿ ಜಿಲ್ಲೆ ಗ್ರೀನ್ ಝೋನ್ನಲ್ಲಿದೆ. ಈ ಹಿನ್ನೆಲೆ ಜನತೆ ಸಹ ನಮಗೆ ಯಾವುದೇ ಭಯವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ವ್ಯವಸ್ಥೆ ಸರಿಪಡಿಸಬೇಕಿದೆ.