ರಾಣೆಬೆನ್ನೂರು/ಹಾವೇರಿ: ಎಳೆಯ ಮಕ್ಕಳು ಅಕ್ಷರ ಕಲಿಯುತ್ತಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟಿದ್ದ್ದು,ಮಕ್ಕಳು ಭಯದಲ್ಲೇ ಅಕ್ಷರಾಭ್ಯಾಸ ಮಾಡುವಂತಾಗಿದೆ.
ರಾಣೆಬೆನ್ನೂರು ನಗರದ ಹೊಸನಗರದಲ್ಲಿರುವ ಬಾಲಮಂದಿರ ಆವರಣದ ಅಂಗನವಾಡಿ-7ರ ಕಟ್ಟಡದ ಸಂಪೂರ್ಣವಾಗಿ ಮೇಲ್ಛಾವಣಿ ಬಿರುಕು ಬಿಟ್ಟಿದ್ದು, ಕಟ್ಟಡದ ಅವಶೇಷಗಳು ಮಕ್ಕಳ ಮೇಲೆ ಬೀಳುತ್ತಿವೆ. ಸುಮಾರು 22 ಮಕ್ಕಳು ಈ ಅಂಗನವಾಡಿಯಲ್ಲಿದ್ದಾರೆ.ಕಟ್ಟಡ ದುಸ್ಥಿತಿ ತಲುಪಿದ್ರೂ ಕೂಡ ಯಾವುದೇ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಸುಮಾರು ಐದು ವರ್ಷಗಳಿಂದ ಹೊಸನಗರ ವ್ಯಾಪ್ತಿಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ. ಈ ಹಿಂದೆ ಸಿಡಿಪಿಓ ಇಲಾಖೆ ಬಾಡಿಗೆ ಕಟ್ಟಡ ಪಡೆದುಕೊಂಡು ಮಕ್ಕಳಿಗೆ ಅಕ್ಷರ ಹೇಳಿ ಕೊಡಲಾಗುತ್ತಿತ್ತು. ನಂತರ ಇಲಾಖೆ ಬಾಡಿಗೆ ಕಟ್ಟಲಾಗದೆ ಸರ್ಕಾರದ ಬಾಲ ಮಂದಿರ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ಅಂಗನವಾಡಿ ನಡೆಸಲು ಅನುವು ಮಾಡಿದೆ. ಕಟ್ಟಡದ ಸ್ಥಿತಿಗತಿ ಬಗ್ಗೆ ನಗರಸಭೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರೂ ಇವರೆಗೂ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ. ಇನ್ನು ಚಿಕ್ಕ ಮಕ್ಕಳು ಬಿರುಕು ಬಿಟ್ಟಿರುವ ಕಟ್ಟಡದ ಒಳಗೆ ಅಕ್ಷರ ಕಲಿಯುತ್ತಿದ್ರೂ ಜನಪ್ರತಿನಿಧಿಗಳಾಗಲಿ ಅಧಿಕಾರಿವರ್ಗವಾಗಲಿ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.