ರಾಣೆಬೆನ್ನೂರು : ತಾಲೂಕಿನ ಆರು ಗ್ರಾಮ ಪಂಚಾಯತ್‌ಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಶೇ.75ರಷ್ಟು ಮತದಾನವಾಗಿದೆ. ಎಲ್ಲಾ ಕಡೆ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ.
ಸುಣಕಲ್ಲಬಿದರಿ, ಜೋತಿಸರಹರಳಹಳ್ಳಿ, ಮಾಳನಾಯಕನಹಳ್ಳಿ, ತುಮ್ಮಿನಕಟ್ಟಿ, ಕುಪ್ಪೆಲೂರ ಗ್ರಾಮ ಪಂಚಾಯತ್‌ನ ಒಟ್ಟು 83 ಸ್ಥಾನಗಳಲ್ಲಿ 81 ಸ್ಥಾನಕ್ಕೆ ಇಂದು ಮತದಾನ ನಡೆದಿದೆ. 2 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿವೆ.
ಓದಿ:ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ: ಸಚಿವ ಪ್ರಭು ಚವ್ಹಾಣ
ಗ್ರಾಪಂ ಮತದಾನ ಇಂದು ಬೆಳಗ್ಗೆ ಏಳು ಗಂಟೆಯಿಂದ ಪ್ರಾರಂಭವಾಗಿದೆ. ಮತ ಚಲಾಯಿಸಲು ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಸರದಿಯಾಗಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು. ಅಲ್ಲದೆ ಸುಣಕಲ್ಲಬಿದರಿ, ಕುಪ್ಪೆಲೂರ ಗ್ರಾಮದಲ್ಲಿ ಮತದಾನ ಬಹಳ ಬಿರುಸಾಗಿ ನಡೆಯಿತು.
ಸಾಮಾಜಿಕ ಅಂತರ ಮರೆತ ಅಧಿಕಾರಿಗಳು : ಚುನಾವಣೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಸರ್ಕಾರ ಕೊರೊನಾ ನಿಯಮಾವಳಿ ಪಾಲಿಸಲು ಕಟ್ಟುನಿಟ್ಟಾಗಿ ಸೂಚನೆ ಮಾಡಿತ್ತು. ಆದರೆ, ಕೆಲ ಮತಗಟ್ಟೆ ಕೇಂದ್ರಗಳಲ್ಲಿ ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತಿದ್ದು ಕಂಡು ಬಂದಿತು. ಅಲ್ಲದೇ ಕೆಲ ಮತದಾರರು ಮಾಸ್ಕ್ ಹಾಕದೇ, ಮತದಾನ ಮಾಡಲು ಬಂದಿದ್ದು ಕಂಡು ಬಂತು.