ಹಾವೇರಿ: ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಅದರಲ್ಲೂ ಕನ್ನಡ ಕೋಗಿಲೆ ಸಿಸನ್- 2ರ ವಿಜೇತರಾದ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರು ಜನ ಕುಣಿದು ಕುಪ್ಪಳಿಸಿದರು.