ರಾಣೆಬೆನ್ನೂರು: ಆರ್.ಶಂಕರ್ 3ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರಿಂದ ಸಂತಸಗೊಂಡ ಅಭಿಮಾನಿಗಳು ತಾಲೂಕಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಓದಿ: ಸಿಡಿನೂ ಇಲ್ಲ, ಪಾಡಿನೂ ಇಲ್ಲ.. ಯತ್ನಾಳ್ ಸುಮ್ನೆ ಹೇಳ್ತಾರೆ ಅಷ್ಟೇ ಎಂದ ಈಶ್ವರಪ್ಪ
ರಾಣೆಬೆನ್ನೂರಿನ ಚೋಳಮರಡೇಶ್ವರ ನಗರದಲ್ಲಿರುವ ಆರ್.ಶಂಕರ್ ನಿವಾಸದ ಎದುರು ಬೆಂಬಲಿಗರು ಸಂಭ್ರಮಿಸಿದರು. ಸತತ 3ನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆ ಆರ್.ಶಂಕರ್ ಹಾಗೂ ಯಡಿಯೂರಪ್ಪ ಪರ ಘೋಷಣೆ ಕೂಗುವ ಮೂಲಕ ಕುಣಿದು ಕುಪ್ಪಳಿಸಿದರು.