ಹಾವೇರಿ: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟ ಅಪ್ಪು ಇನ್ನು ನೆನಪು ಮಾತ್ರ.
ಪುನೀತ್ ರಾಜ್ಕುಮಾರ್ ಚಿಕ್ಕ ಬಾಲಕನಿಂದಾಗ ಲಿಂಗಧಾರಣೆ ಮಾಡಿದ ಖ್ಯಾತಿ ಹಾವೇರಿ ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ. ಡಾ.ರಾಜಕುಮಾರ್ ಒಮ್ಮೆ ಗದಗಿನ ಪುಟ್ಟರಾಜ್ ಗವಾಯಿಗಳಿಗೆ ಮದ್ರಾಸ್ ಮನೆಯಲ್ಲಿಯೇ ಪೂಜೆ-ಪ್ರಸಾದ ಸ್ವೀಕರಿಸಲು ಮನವಿ ಮಾಡಿದ್ದರು. ಆದರೆ ಪಂಡಿತ ಪುಟ್ಟರಾಜ್ ಗವಾಯಿಗಳು ಡಾ.ರಾಜಕುಮಾರ್‌ಗೆ ಲಿಂಗದೀಕ್ಷೆ ಮಾಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಇದನ್ನೂ ಓದಿರಿ: ಪುನೀತ್ ರಾಜ್ಕುಮಾರ್ ನಿಧನ.. ರಾಷ್ಟ್ರಧ್ವಜ ಹೊದಿಸಿ ಸಿಎಂ ಬೊಮ್ಮಾಯಿ ಗೌರವ
ಈ ಹಿನ್ನೆಲೆಯಲ್ಲಿ ಮದ್ರಾಸ್‌ಗೆ ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರನ್ನು ಕರೆಸಿಕೊಂಡಿದ್ದ ಡಾ.ರಾಜ್ ತಮ್ಮ ಕುಟುಂಬದ ಸದಸ್ಯರಿಗೆ ಲಿಂಗದೀಕ್ಷೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ಪುನೀತ್‌ಗೂ ಸಹ ಶಾಂತವೀರ ಪಟ್ಟಾಧ್ಯಕ್ಷರು ಲಿಂಗಧಾರಣೆ ಮಾಡಿದ್ದರು. ಈ ಭಾವಚಿತ್ರ ಹಾವೇರಿಯ ಸಿಂದಗಿಮಠದಲ್ಲಿ ಈಗಲೂ ಇದೆ. ಮಠಕ್ಕೆ ಬಂದ ಭಕ್ತರು ಈ ಅಪರೂಪದ ಚಿತ್ರವನ್ನ ಕಣ್ತುಂಬಿಕೊಳ್ಳುತ್ತಾರೆ.
ಪವರ್ ಸ್ಟಾರ್ ಪುನೀತ್ ನಿಧನವಾಗಿರುವದಕ್ಕೆ ಹಾವೇರಿ ಸಿಂದಗಿಮಠದ ಸಂಚಾಲಕರು ಸೇರಿದಂತೆ ಭಕ್ತರು ದುಃಖ ವ್ಯಕ್ತಪಡಿಸಿದ್ದಾರೆ. ಕನ್ನಡದ ಮೇರುನಟನನ್ನು ಇಷ್ಟು ಬೇಗ ಕಳೆದುಕೊಂಡಿದ್ದಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.