ಹಾವೇರಿ: ಖೋಟಾನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ನಗರದಲ್ಲಿ ನಡೆದಿದೆ.
ಖೋಟಾನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿ ಮೂಲತಃ ದಾವಣಗೆರೆಯ ನಿವಾಸಿ. ಈತ ಬೇಕರಿ, ಕಿರಾಣಿ ಅಂಗಡಿಗಳಲ್ಲಿ ಇಪ್ಪತ್ತು, ಮೂವತ್ತು ರೂಪಾಯಿಯ ವಸ್ತುಗಳನ್ನ ಖರೀದಿಸಿ ಐನೂರರ ಖೋಟಾನೋಟು ನೀಡುತ್ತಿದ್ದ ಎನ್ನಲಾಗಿದೆ.
ಈತ ಹೀಗೆ ಮಾಡಿ ಎರಡು ಅಂಗಡಿಗಲ್ಲಿ ಐನೂರು ರುಪಾಯಿ ಖೋಟಾನೋಟು ನೀಡಿ ಚಿಲ್ಲರೆ ಪಡೆದುಕೊಂಡಿದ್ದ. ಆದರೆ, ನೋಟು ನೋಡಿ ಸಂಶಯಗೊಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯರೇ ಅವನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.