ಹಾವೇರಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪ ಕ್ರಮ ಖಂಡಿಸಿ ಹಾವೇರಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸಿತು.
ನಗರದ ಮುರುಘಾ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಗಿನೆಲೆ ಕ್ರಾಸ್‌ವರೆಗೆ ಸಾಗಿತು. ನಂತರ ಕಾಗಿನೆಲೆ ಕ್ರಾಸ್ ಬಳಿ ರಸ್ತೆ ಬಂದ್ ಮಾಡಿದ ಕಾರ್ಯಕರ್ತರು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಈ ಕೂಡಲೇ ಇದರಿಂದ ಹಿಂದೆ ಸರಿಯಬೇಕು ಮತ್ತು ಕನ್ನಡಿಗರ ಕ್ಷಮೆಯಾಚಿಸುವಂತೆ ಕರವೇ ಆಗ್ರಹಿಸಿತು. ಭಾಷೆಯ ವಿಚಾರದಲ್ಲಿ ಓಲೈಕೆ ರಾಜಕಾರಣ ಬಿಡುವಂತೆ ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ವಾಹನಗಳನ್ನು ತಡೆದ ಕಾರಣ ಆಂಬ್ಯುಲೆನ್ಸ್ಗೆ ಜಾಗ ಸಿಗದೆ ಐದಾರು ನಿಮಿಷಗಳ ಕಾಲ ರಸ್ತೆಯಲ್ಲಿ ನಿಂತ ಘಟನೆ ಸಹ ನಡೆಯಿತು. ನಂತರ ಪೊಲೀಸರು ರಸ್ತೆ ಕ್ಲೀಯರ್ ಮಾಡಿದ್ರು ಸಹ ಐದಾರು ನಿಮಿಷ ಆಂಬ್ಯುಲೆನ್ಸ್ ತಡವಾಗಿ ಜಿಲ್ಲಾಸ್ಪತ್ರೆಗೆ ಹೋದ ಘಟನೆ ನಡೆಯಿತು.