ಹಾವೇರಿ : ರೈತರ ಭೂಸ್ವಾಧೀನ ಖಂಡಿಸಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಬಿ ಡಿ ಹಿರೇಮಠ ನಡೆಸುತ್ತಿರುವ ಪ್ರತಿಭಟನೆ ಐದು ದಿನ ಪೂರೈಸಿದೆ.
ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಿ ಡಿ ಹಿರೇಮಠ ನೀರು-ಆಹಾರ ಬಿಟ್ಟು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಪ್ರತಿಭಟನೆಯಲ್ಲಿ ಹಲವು ರೈತರು ಪಾಲ್ಗೊಂಡು ಅಸ್ವಸ್ಥರಾಗಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದೇ ಭರವಸೆ ನೀಡುತ್ತಿಲ್ಲ.
ಓದಿ: ಬೆಂಗಳೂರಲ್ಲಿ ರೈತರಿಂದ ದಿಢೀರ್ ರಸ್ತೆ ತಡೆ: ಮುಖಂಡರು, ಕಾರ್ಯಕರ್ತರ ಬಂಧನ
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ. ಡಿಸಿ ಸಂಜಯ ಶೆಟ್ಟಣ್ಣವರ್, ಕೆ ಜಿ ದೇವರಾಜ್ ಅವರು ಬಿ ಡಿ ಹಿರೇಮಠ ಮನವೊಲಿಕೆಗೆ ಯತ್ನಿಸಿದರು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ.