ETV Bharat / state

ಹಾವೇರಿ: 4 ಬಾಲಕಾರ್ಮಿಕರ ರಕ್ಷಣೆ

ಹಾವೇರಿಯಲ್ಲಿ ಬಾಲಕಾರ್ಮಿಕರ ರಕ್ಷಣಾ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ನಾಲ್ವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಅವರ ಪೋಷಕರನ್ನು ಸಂಪರ್ಕಿಸಲಾಯಿತು.

Protection of child labors at haveri
ಹಾವೇರಿ: 4 ಬಾಲಕಾರ್ಮಿಕರ ರಕ್ಷಣೆ
author img

By

Published : Jan 8, 2021, 9:42 AM IST

Updated : Jan 8, 2021, 9:56 AM IST

ಹಾವೇರಿ: ಬಾಲ ಕಾರ್ಮಿಕರ ರಕ್ಷಣೆಗಾಗಿ ಗುರುವಾರದಂದು ಹಾವೇರಿ ಉಪ ವಿಭಾಗಾಧಿಕಾರಿ ಡಾ. ದಿಲೀಷ್ ಶಶಿ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆದಿದ್ದು, ನಾಲ್ಕು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ.

4 ಬಾಲಕಾರ್ಮಿಕರ ರಕ್ಷಣೆ

ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ, ವಿವಿಧ ಬಾರ್, ಬೇಕರಿ, ಹೊಟೇಲ್‌ಗಳಲ್ಲಿ, ಕೃಷಿ ಮಾರುಕಟ್ಟೆಯಲ್ಲಿ ಬಾಲ ಕಾರ್ಮಿಕರ ಪತ್ತೆ ಕಾರ್ಯ ನಡೆಯಿತು. ನ್ಯೂ ಚಿಕನ್ ಕಾರ್ನರ್, ಸ್ಪೆಷಲ್ ಧಾರವಾಡ ಪೇಡ ಅಂಗಡಿ, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕಡಲೆಗಿಡ ಮಾರಾಟ ಮಾಡುತ್ತಿದ್ದ ಬಾಲಕರನ್ನು ವಶಕ್ಕೆ ಪಡೆಯಲಾಯಿತು.

ಈ ಸುದ್ದಿಯನ್ನೂ ಓದಿ: ಹೂವಿನಹಡಗಲಿ: ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು

ವಶಕ್ಕೆ ಪಡೆದ ನಾಲ್ಕು ಬಾಲಕಾರ್ಮಿಕರು 15 ವರ್ಷದವರಾಗಿದ್ದು, ಅವರಿಂದ ಮಾಹಿತಿ ಕಲೆ ಹಾಕಿ ಪೋಷಕರನ್ನು ಸಂಪರ್ಕಿಸಲಾಯಿತು. ಮಕ್ಕಳನ್ನು ಕೆಲಸಕ್ಕೆ ಹಚ್ಚದೆ ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಲಾಯಿತು. ಅಂಗಡಿಗಳಲ್ಲಿ ಮಕ್ಕಳನ್ನು ಇಟ್ಟುಕೊಂಡಿದ್ದ ಮಾಲೀಕರಿಗೆ ಸಹ ಎಚ್ಚರಿಕೆ ನೀಡಲಾಯಿತು.

Last Updated : Jan 8, 2021, 9:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.