ETV Bharat / state

ಕಳ್ಳರ ಪಾಲಾಗಿದ್ದ ವಸ್ತುಗಳು ಮತ್ತೆ ವಾರಸುದಾರರ ಕೈಸೇರಿದವು.. ಕಳ್ಳತನ ತಡೆಗೆ ಮುಂಜಾಗ್ರತೆ ಹೇಗಿರಬೇಕು? - ETv Bharat Karnataka

ವಿವಿಧ ಕಳ್ಳತನ ಪ್ರಕರಣ- ಪೊಲೀಸರು ವಶಪಡಿಸಿಕೊಂಡ ಸ್ವತ್ತುಗಳು ವಾರಸುದಾರರಿಗೆ ಹಸ್ತಾಂತರ- ಮನೆಯ ಮಾಲೀಕರು ಮುಂಜಾಗ್ರತೆ ವಹಿಸುವಂತೆ ಹಾವೇರಿ ಎಸ್ಪಿ ಮನವಿ

Etv BharatHaveri district police program to deliver assets seized in theft cases to heirs
ಹಾವೇರಿ ಜಿಲ್ಲಾ ಪೊಲೀಸ್​ರಿಂದ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ತಲುಪಿಸುವ ಕಾರ್ಯಕ್ರಮ
author img

By

Published : Dec 28, 2022, 6:46 AM IST

ಹಾವೇರಿ : ಜಿಲ್ಲಾ ಪೊಲೀಸ್ 2022 ರ ಸಾಲಿನಲ್ಲಿ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ನೀಡುವ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಾರಸುದಾರರಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ aವರು, 2022 ರಲ್ಲಿ 184 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 1 ಕೋಟಿ 77 ಲಕ್ಷ 86 ಸಾವಿರ ಎರಡುನೂರಾ 11 ರೂಪಾಯಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.

ಹಾವೇರಿ ಜಿಲ್ಲೆಯಲ್ಲಿ 2022 ರಲ್ಲಿ ಒಟ್ಟು 479 ಕಳ್ಳತನ ಪ್ರಕರಣಗಳ ದಾಖಲಾಗಿದ್ದು, ಬರೋಬ್ಬರಿ 5 ಕೋಟಿ 17 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಉಳಿದ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಸ್ವತ್ತುಗಳ ಪತ್ತೆ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಆದಷ್ಟು ಬೇಗ ಆರೋಪಿಗಳ ಬಂಧಿಸುವ ಇಂಗಿತವನ್ನು ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ವ್ಯಕ್ತಪಡಿಸಿದರು.

ಯಾವ ಯಾವ ಪ್ರಕರಣಗಳು ಎಷ್ಟೆಷ್ಟು.. 184 ಪ್ರಕರಣಗಳಲ್ಲಿ 13 ಡಕಾಯಿತಿ, 6 ಸುಲಿಗೆ, 3 ಹಗಲು ಕನ್ನ, 36 ರಾತ್ರಿ ಕನ್ನ ಮತ್ತು 2 ಜಾನುವಾರು ಕಳವು ಪ್ರಕರಣ ಮತ್ತು 124 ಸಾಮಾನ್ಯ ಕಳ್ಳತನ ಪ್ರಕರಣಗಳು ಸೇರಿವೆ. ಹಾವೇರಿಯ ಪೊಲೀಸರು ಇದರಲ್ಲಿ 38 ಮೋಟಾರ ಬೈಕ್ ಕಳ್ಳತನ ಪತ್ತೆ ಹಚ್ಚಿದ್ದಾರೆ. ಟ್ರ್ಯಾಕ್ಟರ್, ಅಲ್ಯುಮಿನಿಯಂ ತಂತಿ, ಕುರಿ ಆಡು, ಮೊಬೈಲ್ ಫೋನ್, ಮೆಕ್ಕೆಜೋಳ, ಜೆಸಿಬಿ, ಅಡಕಿ, ಇಟ್ಟಂಗಿ ಮಷೀನ್, ಟಾಟಾ ಮ್ಯಾಜಿಕ ವಾಹನ, 54 ಅಕ್ರಮ ಮರಳು ಸಾಕಾಣಿಕೆ ಪ್ರಕರಣ ಸಹ ಸೇರಿವೆ ಎಂದು ಎಸ್​ಪಿ ಹನುಮಂತರಾಯ ಅವರು ವಿವರಣೆ ನೀಡಿದರು.

ಇದನ್ನೂ ಓದಿ : ಸರಕು-ಸಾಗಾಣಿಕೆ ವಾಹನಗಳಲ್ಲಿ ಜನರ ಪ್ರಯಾಣ ನಿಷೇಧ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ

ಮನೆ ಮಾಲೀಕರು ಮುಂಜಾಗ್ರತೆ ವಹಿಸುವಂತೆ ಮನವಿ.. ವರ್ಷದಿಂದ ವರ್ಷಕ್ಕೆ ಮನೆಕಳ್ಳತನ ಪ್ರಕರಣಗಳು ಅಧಿಕವಾಗುತ್ತಿದ್ದು, ಮನೆಯ ಮಾಲೀಕರು ಸ್ವಲ್ಪ ಮುಂಜಾಗ್ರತೆ ವಹಿಸುವಂತೆ ಎಸ್ಪಿ ಹನುಮಂತರಾಯ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬೀಗ ಹಾಕಿದ ಮನೆಗಳೇ ಕಳ್ಳರ ಟಾರ್ಗೆಟ್..​ ಕಳ್ಳತನ ಪ್ರಕರಣಗಳಲ್ಲಿ 136 ಪ್ರಕರಣಗಳಲ್ಲಿ ಮನೆಗೆ ಬೀಗ ಹಾಕಿದ ಮನೆಗಳನ್ನು ಕಳ್ಳರು ಟಾರ್ಗೆಟ್ ಮಾಡಿ ಕೈಚಳಕ ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಅತಿಹೆಚ್ಚಾಗಿ ನಡೆದಿವೆ.

ಹೀಗರಲಿ ಮುಂಜಾಗ್ರತೆ.. ಮನೆ ಮಾಲೀಕರು ಊರಿಗೆ ಹೋಗುವಾಗ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಬೇಕು. ಬೆಲೆಬಾಳುವ ಆಭರಣಗಳಿದ್ದಲ್ಲಿ ಬ್ಯಾಂಕ್ ಲಾಕರ್ ಅಥವಾ ಪೊಲೀಸ್ ಠಾಣೆಯಲ್ಲಿಟ್ಟು ಊರಿಗೆ ಹೋಗಬೇಕು. ಮನೆಯ ಮುಂದೆ ಬೆಳಕಿನ ವ್ಯವಸ್ಥೆ ಮಾಡಬೇಕು. ಊರಿಗೆ ತೆರಳಿರುವಷ್ಟು ದಿನ ಮನೆಯ ಮುಂದೆ ಹಾಲಿನ ಪ್ಯಾಕೇಟ್ ಮತ್ತು ದಿನ ಪತ್ರಿಕೆಗಳನ್ನು ಹಾಕದಂತೆ ಮೊದಲೇ ಸೂಚಿಸಬೇಕು. ಇದರಿಂದ ಕಳ್ಳರಿಗೆ ಮನೆಯವರು ಬೇರೆ ಕಡೆ ಹೋಗಿದ್ದಾರೆ ಎಂದು ತಿಳಿಯುವುದಿಲ್ಲಾ ಎಂದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ಅವರು ಜನತೆಗೆ ಹಲವು ಮುಂಜಾಗ್ರತಾ ಸಲಹೆಗಳನ್ನು ನೀಡಿದರು.

ಪೊಲೀಸ್​ ಸಿಬ್ಬಂದಿಗೆ ಜನರ ಧನ್ಯವಾದ.. ಈವರೆಗೆ ತಮ್ಮ ಮನೆಯ ಸ್ವತ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಜಿಲ್ಲೆಯ ಜನರು ಕೊನೆಗೂ ನಿಟ್ಟುಸಿರುವ ಬಿಟ್ಟರು. ಅಲ್ಲದೆ ಕಾರ್ಯಕ್ರಮದಲ್ಲಿ ತಮ್ಮ ಸ್ವತ್ತುಗಳನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಪೊಲೀಸ್​ ಸಿಬ್ಬಂದಿ ಕಾರ್ಯಕ್ಕೆ ಧನ್ಯವಾದ ತಿಳಿಸಿದರು. ಮುಂಜಾಗ್ರತೆ ವಹಿಸುವುದಾಗಿ ಹೇಳಿದರು.

ಇದನ್ನೂ ಓದಿ : ಕೋಟಿ ಮೌಲ್ಯದ ಕಳವಾಗಿದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಹಾವೇರಿ ಜಿಲ್ಲಾ ಪೊಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.