ETV Bharat / state

ಕುಡಿಯುವ ನೀರಿನ ಯೋಜನೆಯ ಕಳಪೆ ಕಾಮಗಾರಿ.. ಚಕಾರ ಎತ್ತದ ನಗರಸಭಾ ಅಧಿಕಾರಿಗಳು.. - Ranebennuru news

ನಗರಕ್ಕೆ ಮುಂದಿನ ಐದು ದಶಕಗಳ ಕಾಲ ಮತ್ತು ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಈ ಕಾಮಗಾರಿ ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದು, ಒಂದು ದಶಕವೂ ಬಾಳಿಕೆ ಬರಲ್ಲ ಎನ್ನುತ್ತಾರೆ ಸದಸ್ಯರು..

Ranebennuru
Ranebennuru
author img

By

Published : Sep 19, 2020, 5:07 PM IST

ರಾಣೆಬೆನ್ನೂರು(ಹಾವೇರಿ): ನಗರದ ಬಹುನೀರಿಕ್ಷಿತ 24x7 ಕುಡಿಯುವ ನೀರಿನ ಅಮೃತ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಕೂಗು ನಗರಸಭಾ ಸದಸ್ಯರಿಂದಲೇ ಕೇಳಿ ಬಂದಿದೆ.

ಕುಡಿಯುವ ನೀರಿನ ಯೋಜನೆಯ ಕಳಪೆ ಕಾಮಗಾರಿ

ರಾಣೆಬೆನ್ನೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಕೇಂದ್ರ, ರಾಜ್ಯ ಹಾಗೂ ನಗರಸಭೆ ವತಿಯಿಂದ ಅಮೃತ ಯೋಜನೆಯಡಿ 118.60 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗೆ 2017ರಲ್ಲಿ ಅಂದಿನ ಶಾಸಕ ಕೆ ಬಿ ಕೋಳಿವಾಡರು ಮತ್ತು ಸಂಸದ ಶಿವಕುಮಾರ ಉದಾಸಿಯವರು ಚಾಲನೆ ನೀಡಿದ್ದರು. ಅಂದಿನಿಂದ ಈವರೆಗೂ ಕಾಮಗಾರಿ ನಡೆಯುತ್ತಿದೆ. ಈ ನಡುವೆ ನಗರಸಭಾ ಸದಸ್ಯರೇ ಕಾಮಗಾರಿ ಕಳಪೆಯಾಗಿದೆ ಎಂದು ದನಿ ಎತ್ತಿದ್ದಾರೆ.

ಯೋಜನೆ ಪ್ರಕಾರ ಕಾಮಗಾರಿಯು 2020 ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿದೆ. ಅಲ್ಲದೆ ಡಿಸೆಂಬರ್ ತಿಂಗಳಲ್ಲಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಇರುವುದರಿಂದ ಶಾಸಕರು ಅಂದು ಕಾಮಗಾರಿ ಉದ್ಘಾಟಿಸುವ ಸಲುವಾಗಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ. ಇದರಿಂದ ವಿವೋಲಿಯಾ ಪ್ರೈವೇಟ್ ಲಿಮಿಟೆಡ್​ನ ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ಮುಗಿಸುವ ಬರದಲ್ಲಿ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದಾರೆ ಮತ್ತು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಯೋಜನಾ ವರದಿ ಪ್ರಕಾರ, ಪೈಪ್​ಲೈನ್ 3.28 ಅಡಿ ಆಳದಲ್ಲಿ ಅಥವಾ 2 ಅಡಿಯಲ್ಲಿ ಹಾಕಬೇಕಾಗಿದೆ. ಕಾಮಗಾರಿ ತರಾತುರಿಯಲ್ಲಿ ಪೂರ್ಣಗೊಳಿಸಲು ಪೈಪ್​ಲೈನ್​ ಅಳವಡಿಸಿದ ಜಾಗಕ್ಕೆ ಗುತ್ತಿಗೆದಾರರು ಕಳಪೆ ಮಟ್ಟದ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆ ಮಾಡಿ ಕೈತೊಳೆದುಕೊಂಡಿದ್ದಾರೆ. ನೀರು ಶೇಖರಣೆಗಾಗಿ ನಗರದ ವಿವಿಧ ಭಾಗದಲ್ಲಿ ಐದು ಕಡೆ ಓವರ್ ಟ್ಯಾಂಕ್​ಗಳನ್ನು ನಿರ್ಮಿಸಲಾಗಿದೆ.

ಈ ಕಾಮಗಾರಿ ಕೂಡ ಕಳಪೆಯಾಗಿದೆ ಎಂದು ನಗರಸಭಾ ಸದಸ್ಯರು ಆರೋಪಿಸಿದರು. ಅಮೃತ ಯೋಜನೆ ಅಡಿ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.20 ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆ ಶೇ.30 ಹಣ ಮೀಸಲಿರಿಸಿವೆ.

ನಗರಕ್ಕೆ ಮುಂದಿನ ಐದು ದಶಕಗಳ ಕಾಲ ಮತ್ತು ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಈ ಕಾಮಗಾರಿ ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದು, ಒಂದು ದಶಕವೂ ಬಾಳಿಕೆ ಬರಲ್ಲ ಎನ್ನುತ್ತಾರೆ ಸದಸ್ಯರು. ಕಾಮಗಾರಿ ಕಳಪೆಯಾಗಲು ಸಹಕರಿಸಿದ ನಗರಸಭಾ ಅಧಿಕಾರಿಗಳ ವಿರುದ್ಧ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ ಸದಸ್ಯರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.