ETV Bharat / state

ಲಾಕ್‌ ಡೌನ್ ನಡುವೆ ಟಗರು ಕಾಳಗ; 8 ಜನರ ಬಂಧನ - people violated lockdown rules arrested

ಲಾಕ್‌ಡೌನ್ ನಿಯಮ ಮೀರಿ ಟಗರು ಕಾಳಗದ ಜೂಜಾಟದಲ್ಲಿ ತೊಡಗಿದ್ದ ಜನರನ್ನು ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

lockdown
lockdown
author img

By

Published : Jul 26, 2020, 11:35 PM IST

ರಾಣೆಬೆನ್ನೂರ: ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ವಿಧಿಸಲಾಗಿದೆ. ಈ ನಡುವೆ ನಿಯಮ ಉಲ್ಲಂಘನೆ ಮಾಡಿ ಟಗರು ಕಾಳಗದ ಜೂಜಾಟ ನಡೆಸುತ್ತಿದ್ದ ಎಂಟು ಜನರನ್ನು ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಣೆಬೆನ್ನೂರ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ಕುರಿಗಳ ಕಾಳಗ ಮೂಲಕ ಇವರು ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ರಾಣೆಬೆನ್ನೂರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ಮಾಡಿ ಎಂಟು ಜನರು ಮತ್ತು ಎರಡು ಟಗರುಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಪೊಲೀಸರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ವಿರುದ್ಧ ಆಯೋಜಕರು ‌ಮತ್ತು ಬೆಂಬಲಿಗರು ಧಿಕ್ಕಾರ ಕೂಗಿದ ಘಟನೆ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.