ETV Bharat / state

ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ಮಾಡದಿದ್ದರೆ ಶಾಸಕರ ವಿರುದ್ಧ ಪ್ರತಿಭಟನೆ ಎಚ್ಚರಿಕೆ - ಶಾಸಕ ಅರುಣಕುಮಾರ ಪೂಜಾರ

ಶಾಸಕ ಅರುಣಕುಮಾರ ಪೂಜಾರ ಹರನಗಿರಿ ಗ್ರಾಮಕ್ಕೆ ಆಗಮಿಸಿ, ಚಿಕ್ಕಕುರವತ್ತಿ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ ಶಂಕು ಸ್ಥಾಪನೆ ಮಾಡದೆ ವಾಪಸ್​ ಹೋಗಿದ್ದು, ಶಾಸಕರ ವಿರುದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gangavathi
ದಲಿತ ಮುಖಂಡರು
author img

By

Published : Aug 27, 2020, 11:21 PM IST

ರಾಣೆಬೆನ್ನೂರು: ಮಹಾಚೈತನ್ಯ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಶಂಕು ಸ್ಥಾಪನೆ ಮಾಡದೇ ವಾಪಸ್​ ಹೋದ ಶಾಸಕರ ವಿರುದ್ಧ ದಲಿತ ಸಮುದಾಯದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಮುಖಂಡರ ಎಚ್ಚರಿಕೆ

ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲು ಅನುದಾನ ನೀಡಲಾಗಿದೆ. ಇದಕ್ಕೆ ಅ. 24ರಂದು ಶಾಸಕ ಅರುಣಕುಮಾರ ಪೂಜಾರ ಶಂಕು ಸ್ಥಾಪನೆಯನ್ನು ಮಾಡಲು ಇಲಾಖೆಯವರು ಆಮಂತ್ರಣ ನೀಡಿದ್ದಾರೆ. ಆದರೆ ಶಾಸಕರು ಹರನಗಿರಿ ಗ್ರಾಮಕ್ಕೆ ಆಗಮಿಸಿ, ಚಿಕ್ಕಕುರವತ್ತಿ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ ಶಂಕು ಸ್ಥಾಪನೆಯನ್ನು ಮಾಡದೆ ವಾಪಸ್​ ಹೋಗಿದ್ದು, ವಿಷಾದಕರ ಸಂಗತಿ. ಇದರಿಂದ ಗ್ರಾಮದ ದಲಿತ ಸಮುದಾಯ ಜನಗಳಿಗೆ ನೋವುಂಟು ಮಾಡಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದಂತಾಗಿದೆ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಆರೋಪಿಸಿದರು.

ಶಾಸಕರು ಇದೇ 31ರ ಒಳಗಾಗಿ ಅಂಬೇಡ್ಕರ್ ಭವನಕ್ಕೆ ಶಂಕು ಸ್ಥಾಪನೆ ಮಾಡದಿದ್ದರೆ ತಹಶೀಲ್ದಾರ್​ ಕಚೇರಿ ಎದುರು ಪ್ರತಿಭಟನೆ ‌ನಡೆಸಲಾಗುತ್ತದೆ ಎಂದು ಗ್ರಾಮದ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.