ETV Bharat / state

ಸ್ವಾತಂತ್ರ್ಯ ಅಮೃತ ಮಹೋತ್ಸವ: ಹಾವೇರಿಯಲ್ಲಿ ದೇಶಭಕ್ತರ ಚಿತ್ರ ರಚನಾ ಶಿಬಿರ ಮುಕ್ತಾಯ - ಸ್ವಾತಂತ್ರ್ಯ ಅಮೃತ ಮಹೋತ್ಸವ

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಶ್ರಯದಲ್ಲಿ ನಗರದ ವೀರಸೌಧದ ಆವರಣದಲ್ಲಿರುವ ಮೈಲಾರ ಮಹಾದೇವ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ದೇಶಭಕ್ತರ ಚಿತ್ರ ರಚನಾ ಶಿಬಿರ ನಡೆಯಿತು.

Patriots picture Creator Camp in haveri
ಸ್ವಾತಂತ್ರ್ಯ ಅಮೃತ ಮಹೋತ್ಸವ; ಹಾವೇರಿಯಲ್ಲಿ ದೇಶಭಕ್ತರ ಚಿತ್ರ ರಚನಾ ಶಿಬಿರ ಸಂಪನ್ನ
author img

By

Published : Aug 27, 2021, 8:02 AM IST

Updated : Aug 27, 2021, 10:22 AM IST

ಹಾವೇರಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಹಾವೇರಿಯಲ್ಲಿ ಚಿತ್ರಕಲಾ ರಚನಾ ಶಿಬಿರ ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಶ್ರಯದಲ್ಲಿ ನಗರದ ವೀರಸೌಧದ ಆವರಣದಲ್ಲಿರುವ ಮೈಲಾರ ಮಹಾದೇವ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ದೇಶಭಕ್ತರ ಚಿತ್ರ ರಚನಾ ಶಿಬಿರಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

ಹಾವೇರಿಯಲ್ಲಿ ದೇಶಭಕ್ತರ ಚಿತ್ರ ರಚನಾ ಶಿಬಿರ ಮುಕ್ತಾಯ

ಶಿಬಿರದಲ್ಲಿ ಜಿಲ್ಲೆಯ 11ಕ್ಕೂ ಅಧಿಕ ಚಿತ್ರಕಲಾವಿದರು ಪಾಲ್ಗೊಂಡು ತಮ್ಮ ಕಲೆಯನ್ನು ಅನಾವರಣಗೊಳಿಸಿದರು. ಸ್ವಾತಂತ್ರ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಹೋರಾಟಗಾರರ ಪಾತ್ರ ಕುರಿತ ಚಿತ್ರ ಶೀರ್ಷಿಕೆಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಹಾವೇರಿ ಜಿಲ್ಲೆಯ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ, ತಿರಕ್ಕಪ್ಪ ಮಡಿವಾಳ, ಗಾಂಧೀಜಿ ಸೇರಿದಂತೆ ಹಲವರ ಚಿತ್ರಗಳು ಕಲಾವಿದರ ಕಲಾಕುಂಚದಲ್ಲಿ ಅರಳಿದವು. ಮೈಲಾರ ಮಹದೇವಪ್ಪ ಹೆಸರಿನ ಅಂಚೆಚೀಟಿ ಗಮನಸೆಳೆಯಿತು.

ಪ್ರಸ್ತುತ ಸ್ವಾತಂತ್ರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಟ್ರಸ್ಟ್ ಮತ್ತು ಜಿಲ್ಲಾಡಳಿತದ ಕಾರ್ಯ ಸಂತಸ ತಂದಿದೆ. ಜಿಲ್ಲೆಯ ಸ್ವಾತಂತ್ರ ಹೋರಾಟಗಾರರನ್ನು ನೆನೆಯಲು ಇದೊಂದು ಉತ್ತಮ ವೇದಿಕೆ ಎಂಬ ಅಭಿಪ್ರಾಯವನ್ನ ಕಲಾವಿದರು ವ್ಯಕ್ತಪಡಿಸಿದರು. ಶಿಬಿರದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಕಲಾವಿದರಿಗೆ ಪೇಂಟಿಂಗ್ ಪರಿಕರಗಳನ್ನು ವಿತರಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು, ಸಾಹಿತಿ ಸತೀಶ ಕುಲಕರ್ಣಿ ಇದ್ದರು.

Last Updated : Aug 27, 2021, 10:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.