ಹಾವೇರಿ: ನಿನ್ನೆ ರಾತ್ರಿ ವಿಧಿವಶರಾದ ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಪಾಟೀಲ್ ಪುಟ್ಟಪ್ಪ ಅವರ ಅಂತ್ಯಕ್ರಿಯೆಗೆ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಹಲಗೇರಿಯ ಹೊರವಲಯದಲ್ಲಿರುವ ಪಾಪು ಅಡಿಕೆ ತೋಟದಲ್ಲಿ ಕ್ರಿಯಾಸಮಾಧಿ ಸಿದ್ಧಪಡಿಸಲಾಗುತ್ತಿದೆ.
ಅಂತ್ಯಕ್ರಿಯೆಗೂ ಮುನ್ನ ಪಾಪು ಅವರ ಪಾರ್ಥಿವ ಶರೀರವನ್ನು ಗ್ರಾಮದ ಸಭಾ ಭವನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮನೆಯಲ್ಲಿ ಪೂಜೆ ಸಲ್ಲಿಸಿ, ಅಡಿಕೆ ತೋಟದಲ್ಲಿ ನಿರ್ಮಿಸುತ್ತಿರುವ ಕ್ರಿಯಾ ಸಮಾಧಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ಪಾಟೀಲ್ ಪುಟ್ಟಪ್ಪ ಅವರ ಅಂತಿಮ ಸಂಸ್ಕಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಣೆಬೆನ್ನೂರು ತಹಶೀಲ್ದಾರ್ ಬಸನಗೌಡ ಕೋಟೂರು ಮಾಹಿತಿ ನೀಡಿದ್ದಾರೆ.