ETV Bharat / state

'ಕಾಂಗ್ರೆಸ್​ನವರು ಮಾತ್ರವಲ್ಲ, ಬಿಎಸ್​ವೈ, ಪುತ್ರ ವಿಜಯೇಂದ್ರ ಜೈಲಿಗೆ ಹೋಗುವ ಸಮಯ ಬರಲಿದೆ'

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಮಾತನಾಡಿದರು.

Yatnal who held a barrage against Vachanananda Swamiji
ಯತ್ನಾಳ ಹೊಸ ಬಾಂಬ್​
author img

By

Published : Jun 16, 2022, 10:00 PM IST

Updated : Jun 16, 2022, 10:28 PM IST

ಹಾವೇರಿ: ಕಾಂಗ್ರೆಸ್​ನವರು ಮಾತ್ರವಲ್ಲ, ಬಿಜೆಪಿಯ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಸಹ ಜೈಲಿಗೆ ಹೋಗುವ ಸಮಯ ಬರುತ್ತದೆ ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಹೊಸ ಬಾಂಬ್​ ಸಿಡಿಸಿದ್ದಾರೆ. ಅವರು ದುಬೈ ಮತ್ತು ಮಾರಿಷಸ್​ನಲ್ಲಿ ಆಸ್ತಿ ಮಾಡಿದ್ದಾರೆ, ಹಾಗಾಗಿ ವಿಜಯೇಂದ್ರ ಆಗಾಗ ಆ ದೇಶಗಳಿಗೆ ಹೋಗಿ ಬರುತ್ತಾರೆ ಎಂದರು.

ಕೆಲವು ಸ್ವಾಮೀಜಿಗಳು 10 ಕೋಟಿ ರೂಪಾಯಿ ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ. ಏರ್ ಕಂಡೀಷನ್ ರೂಮಿನಲ್ಲಿ ಕುಳಿತಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಂತೆ ಎಂದೂ ಕಟ್ಟಕಡೆಯ ಹಳ್ಳಿಗೆ ಹೋಗಿ ಹೋರಾಟ ಮಾಡಿಲ್ಲ. ಯಡಿಯೂರಪ್ಪ ಮಠಕ್ಕೆ ಹತ್ತು ಕೋಟಿ ನೀಡಿರುವ ಅನುದಾನದಲ್ಲಿ ಸಹ ಅವ್ಯವಹಾರವಾಗಿದೆ. ಇದನ್ನು ವಿಧಾನಸಭೆ ಕಲಾಪದಲ್ಲಿ ಬಹಿರಂಗಗೊಳಿಸುವುದಾಗಿ ಯತ್ನಾಳ್ ಹೇಳಿದರು.

ಸ್ವಾಮೀಜಿಗಳ ಹೋರಾಟ ಜೋರಾಗುತ್ತಿದ್ದಂತೆ ನಿನ್ನೆ ನಮ್ಮ ಒಬ್ಬ ಸ್ವಾಮೀಜಿ ಮನವಿ ಪತ್ರ ನೀಡಿದ್ದಾರೆ ಎಂದು ಪರೋಕ್ಷವಾಗಿ ವಚನಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ತಿಂಗಳ 22ರಂದು ಮೀಸಲಾತಿ ಸಂಬಂಧ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸವಿದೆ. 22ರ ನಂತರ ಹೋರಾಟದ ರೂಪುರೇಷೆ ಬಗ್ಗೆ ನಿರ್ಣಯ ಆಗಲಿದೆ ಎಂದು ತಿಳಿಸಿದರು.

ಬ್ರಿಟನ್‌ ರಾಣಿಯ ನಂತರ ಸೋನಿಯಾ ಗಾಂಧಿಯೇ ದೊಡ್ಡ ಶ್ರೀಮಂತೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಲು ಕೇಂದ್ರ ಸರ್ಕಾರ ಒತ್ತಡ ಹಾಕಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಇಡಿ ತನಿಖೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ತಾಕತ್ ಇದ್ದರೆ ಮೋಟಮ್ಮ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿ: ಎಂ.ಪಿ.ಕುಮಾರಸ್ವಾಮಿ

Last Updated : Jun 16, 2022, 10:28 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.