ETV Bharat / state

ಆಜಾದಿ ಆಂದೋಲನ ನಡೆಸಿದ್ದ ಮೋಟೆಬೆನ್ನೂರಿನ ಹುಲಿ.. ದಂಡಿ ಸತ್ಯಾಗ್ರಹದಲ್ಲಿ ಹೆಜ್ಜೆ ಹಾಕಿದ್ದ ಏಕೈಕ ಕನ್ನಡಿಗ.. - 75ನೇ ಸ್ವಾತಂತ್ರ್ಯೋತ್ಸವ

ಮೈಲಾರ ಮಹದೇವ ಚಿಕ್ಕಂದಿನಲ್ಲಿಯೇ ದೇಶಾಭಿಮಾನ ಮೈಗೂಡಿಸಿಕೊಂಡಿದ್ದರು. ಆದರೆ, ತಂದೆಗೆ ಚಳವಳಿಯಲ್ಲಿ ಸೇರೋದು ಇಷ್ಟವಿರಲಿಲ್ಲ. ತಾಯಿ ಖಾದಿ ಪ್ರೇಮಿ. ಮಹಾದೇವ ಅವರಿಗದು ರಕ್ತವಾಗಿ ಬಂದಿತ್ತು. ಗಾಂಧೀಜಿ ಮೇಲೆ ಅವರಿಗೆ ಇನ್ನಿಲ್ಲದ ಭಕ್ತಿ ಇದ್ದ ಕಾರಣವೇ ದಂಡಿ ಸತ್ಯಾಗ್ರಹಕ್ಕಾಗಿ ಸಾಬರಮತಿಗೆ ತೆರಳಲು ಅವರಿಗೆ ಪ್ರೇರಣೆಯಾಯ್ತು..

mylara-mahadeva-who-fought-azadi-movement-with-gandhi
ಆಜಾದಿ ಆಂದೋಲನ ನಡೆಸಿದ್ದ ಮೋಟೆಬೆನ್ನೂರಿನ ಹುಲಿ
author img

By

Published : Aug 15, 2021, 11:05 AM IST

ಬ್ರಿಟಿಷ್ ಗುಳ್ಳೇ ನರಿಗಳು ಗುಂಡಿನ ಮಳೆ ಸುರಿಸುತ್ತಿದ್ದವು. ಬೆಚ್ಚದೇ, ಬೆವರದೇ, ಬೆದರದೇ ನಿಂತಿದ್ದರು ಕ್ರಾಂತಿಕಾರಿ. ಬೆನ್ನು ತೋರದೇ ಎದೆಯುಬ್ಬಿಸಿದ್ದ ಆ ಸ್ವಾತಂತ್ರ ಸೇನಾನಿಯೇ ಮೈಲಾರ ಮಹಾದೇವ

ಅದು 1943ರ ಏಪ್ರಿಲ್‌ 1.. ಹೊಸರಿತ್ತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ತೆರಿಗೆ ಹಣಕ್ಕೆ ಮುತ್ತಿಗೆ ಹಾಕಿದಾಗಲೇ ಬ್ರಿಟಿಷರ ಗುಂಡೇಟಿಗೆ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಸೇರಿ ಮೈಲಾರ ಮಹಾದೇವ ಹುತಾತ್ಮರಾಗಿಬಿಟ್ಟರು. ಮತ್ತೆ ಮತ್ತೆ ಹೇಳ್ತೇನೆ ಕೇಳಿ, ಹಾವೇರಿ.. ಸ್ವಾತಂತ್ರ ಹೋರಾಟದ ಕಲಿಗಳು ಜನ್ಮವೆತ್ತಿದ್ದ ವೀರರ ಭೂಮಿ. ಇದೇ ನೆಲದಲ್ಲಿ ಆಜಾದಿ ಕಿಚ್ಚು ಹಚ್ಚಿದ್ದ ಮೈಲಾರ ಮಹಾದೇವ ಆಂಗ್ಲರ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಆಜಾದಿ ಆಂದೋಲನ ನಡೆಸಿದ್ದ ಮೋಟೆಬೆನ್ನೂರಿನ ಹುಲಿ

ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜತೆ ಹೆಜ್ಜೆ ಹಾಕಿದ್ದ ಏಕೈಕ ವೀರ ಕನ್ನಡಿಗ

ಜೂನ್ 8ರಂದು ಬ್ಯಾಡಗಿ ಮೋಟೆಬೆನ್ನೂರಿನಲ್ಲಿ ಜನಿಸಿದ್ದ ಅವರು, ಗಾಂಧೀಜಿಯ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ನಿರಂತರ 212 ಮೈಲು ರಾಷ್ಟ್ರಪಿತನ ಜತೆ ಹೆಜ್ಜೆ ಹಾಕಿದ್ದ ಏಕೈಕ ಕನ್ನಡಿಗ ಅನ್ನೋದೇ ಹೆಮ್ಮೆ. ಮಹಾತ್ಮನ ಖಾದಿ ಪ್ರೇಮ, ಸರಳತೆ, ದೇಶಾಭಿಮಾನ, ಅಸ್ಪಷ್ಯತೆ ವಿರುದ್ಧ ಹೋರಾಟವನ್ನ ಅನುಸರಿಸಿದ್ದ ಮೈಲಾರ ಮಹಾದೇವ, ಸುಭಾಷ್‌ಚಂದ್ರ ಬೋಸ್‌ರಂತೆ ಕ್ರಾಂತಿಕಾರಿಯೂ ಹೌದು. ಅಸಹಕಾರ ಚಳವಳಿಯ ಭಾಗವಾಗಿ ರೈಲ್ವೆ ರೋಕೋ, ಟಪಾಲ್ ಕಳ್ಳತನ ಮತ್ತು ತೆರಿಗೆ ಹಣ ಕೊಳ್ಳೆ ಹೊಡೆದರು. ಆ ಮೂಲಕ ಸ್ವಾತಂತ್ರ ಕಿಡಿ ಎಲ್ಲೆಡೆ ಹೊತ್ತಿಸಿದರು. ಇವರ ದಾರಿಯಲ್ಲೇ ನೂರಾರು ಮಂದಿ ಸ್ವಾತಂತ್ರ ಹೋರಾಟಕ್ಕೆ ಧುಮುಕಿದರು.

ಸಿಡಲಮರಿಯ ಮಡದಿ ಸಿದ್ದಮ್ಮ ಕಸ್ತೂರಿ ಬಾ ಜತೆ ಜೈಲಿಗೆ ಹೋಗಿದ್ದರು

ಮೈಲಾರ ಮಹದೇವ ಚಿಕ್ಕಂದಿನಲ್ಲಿಯೇ ದೇಶಾಭಿಮಾನ ಮೈಗೂಡಿಸಿಕೊಂಡಿದ್ದರು. ಆದರೆ, ತಂದೆಗೆ ಚಳವಳಿಯಲ್ಲಿ ಸೇರೋದು ಇಷ್ಟವಿರಲಿಲ್ಲ. ತಾಯಿ ಖಾದಿ ಪ್ರೇಮಿ. ಮಹಾದೇವ ಅವರಿಗದು ರಕ್ತವಾಗಿ ಬಂದಿತ್ತು. ಗಾಂಧೀಜಿ ಮೇಲೆ ಅವರಿಗೆ ಇನ್ನಿಲ್ಲದ ಭಕ್ತಿ ಇದ್ದ ಕಾರಣವೇ ದಂಡಿ ಸತ್ಯಾಗ್ರಹಕ್ಕಾಗಿ ಸಾಬರಮತಿಗೆ ತೆರಳಲು ಅವರಿಗೆ ಪ್ರೇರಣೆಯಾಯ್ತು. ತವರಿಗೆ ಬಂದು ಬ್ರಿಟಿಷರ ವಿರುದ್ಧ ಸಿಡಿಲಮರಿಯಂತೆ ಘರ್ಜಿಸ ತೊಡಗಿದರು. ಇವರಿಂದಾಗಿಯೇ ಆ ಭಾಗದಲ್ಲಿ ಸ್ವಾತಂತ್ರದ ಹೋರಾಟದ ಜ್ಯೋತಿ ಬೆಳಗಿತು. ವಿಶೇಷ ಅಂದ್ರೇ ಮಹಾದೇವರ ಧರ್ಮಪತ್ನಿ ಸಿದ್ದಮ್ಮ ಕೂಡ ಕಸ್ತೂರಿ ಬಾ ಅವರೊಂದಿಗೆ ಜೈಲಿಗೂ ಹೋಗಿದ್ದರು. ಅಷ್ಟರಮಟ್ಟಿಗೆ ಈ ದಂಪತಿ ಆಜಾದಿ ಚಳವಳಿಗೆ ತಮ್ಮನ್ನ ಅರ್ಪಿಸಿಕೊಂಡಿತ್ತು

ಕಂಪನಿ ಸರ್ಕಾರದ ವಿರುದ್ಧವೇ ಜನ ದಂಗೆ ಏಳುವ ಭೀತಿ ಆಂಗ್ಲರನ್ನ ಕಾಡಿತ್ತು

ಮಹಾದೇವ ಸೇರಿ ಮೂವರ ಹತ್ಯಾಕಾಂಡ ನಡೆಸಿ ಬ್ರಿಟಿಷರು, ಮೂವರನ್ನೂ ಒಂದೇ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಮೃತದೇಹಗಳನ್ನ ಹಸ್ತಾಂತರಿಸಿದ್ರೇ, ಕಂಪನಿ ಸರ್ಕಾರದ ವಿರುದ್ಧವೇ ಜನ ದಂಗೆ ಏಳುವ ಬೀತಿ ಆಂಗ್ಲರಲ್ಲಿತ್ತು. ಒಂದೇ ಜಾಗದಲ್ಲೀಗ ವೀರಸೌಧ ನಿರ್ಮಿಸಲಾಗಿದೆ. 2018ರಲ್ಲಿ ಅಂಚೆಚೀಟಿ, 2020ರಲ್ಲಿ ಹಾವೇರಿ ರೈಲು ನಿಲ್ದಾಣಕ್ಕೆ ಮೈಲಾರ ಮಹಾದೇವರ ಹೆಸರಿಡಲಾಗಿದೆ. ಭಾರತ ದೇಶದ ಬಂಧ ವಿಮೋಚನೆಗೆ ಭಾರೀ ಕಷ್ಟವ ಸೋಸಿದರು. ತಾರುಣ್ಯವೆಲ್ಲವ

ತುರಂಗದಲಿ ಕಳೆದು ಮಡಿದ ಮಹಾಶೂರ ಮೈಲಾರರು. ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ. ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೂ ತೀರದ ಉಪಕಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.