ಹಾವೇರಿ : ತಾಯಿ ಮತ್ತು ಮಗ ಸಾವಿನಲ್ಲೂ ಒಂದಾಗಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಯಲ್ಲವ್ವ ತಿಮ್ಮನಹಳ್ಳಿ(80) ಹಾಗೂ ಇವರ ಮಗ ಷಣ್ಮುಖಪ್ಪ ತಿಮ್ಮನಹಳ್ಳಿ(45) ಎಂದು ಗುರುತಿಸಲಾಗಿದೆ.
ಯಲ್ಲವ್ವ ಇಂದು ಬೆಳಗ್ಗೆ ವಯೋಸಹಜವಾಗಿ ಮೃತಪಟ್ಟಿದ್ದರು. ಮೃತ ಯಲ್ಲವ್ವಳಿಗೆ ಒಟ್ಟು ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯಲ್ಲವ್ವ ಕಿರಿಯ ಪುತ್ರನ ಮನೆಯಲ್ಲಿ ವಾಸವಾಗಿದ್ದಳು. ಯಲ್ಲವ್ವ ಮೃತಪಟ್ಟಿರುವ ಸುದ್ದಿಯನ್ನು ಪಕ್ಕದ ಮನೆಯಲ್ಲಿ ವಾಸವಿದ್ದ ಎರಡನೆಯ ಪುತ್ರ ಷಣ್ಮುಖಪ್ಪನಿಗೆ ತಿಳಿಸಲು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಷಣ್ಮುಖಪ್ಪ ಮಲಗಿದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಬಳಿಕ ಮೃತರ ಕುಟುಂಬಸ್ಥರು ಹಾಗೂ ಗ್ರಾಮದ ಜನರು ಸಾವಿನಲ್ಲಿ ಒಂದಾದ ತಾಯಿ ಮತ್ತು ಮಗನ ಮೃತದೇಹಗಳನ್ನು ಗ್ರಾಮದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು..