ETV Bharat / state

ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಅಪೂರ್ಣ.. ಹದಗೆಟ್ಟ ರಸ್ತೆಯಿಂದ ಗ್ರಾಮಸ್ಥರು ಹೈರಾಣ - haveri bridge work

ಹಾವೇರಿ ಮತ್ತು ರಾಣೆಬೆನ್ನೂರು ನಡುವೆ ಬರುವ ಮೋಟೆಬೆನ್ನೂರು ಗ್ರಾಮಕ್ಕೆ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಗ್ರಾಮಕ್ಕೆ ಸಮರ್ಪಕ ಸರ್ವೀಸ್ ರಸ್ತೆ ಸಹ ನಿರ್ಮಾಣಗೊಂಡಿಲ್ಲ. ಪರಿಣಾಮ ಜನರು ನಿತ್ಯ ಪ್ರಾಣಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

motebennuru village people facing difficulties from Incompletion of bridge work
ಅಪೂರ್ಣ ಕಾಮಗಾರಿಯಿಂದ ಹೈರಾಣಾದ ಜನ!
author img

By

Published : Jul 14, 2021, 12:22 PM IST

ಹಾವೇರಿ: ದಾವಣಗೆರೆಯಿಂದ ಹುಬ್ಬಳ್ಳಿಯವರೆಗೆ ಇದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ಚತುಷ್ಪಥ ರಸ್ತೆಯಿಂದ ಷಟ್ಪಥವಾಗಿ ಮಾರ್ಪಡಿಸಲಾಗಿದೆ. ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಕೆಲವೊಂದು ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಆದರೆ ಹಾವೇರಿ ಮತ್ತು ರಾಣೆಬೆನ್ನೂರು ನಡುವೆ ಬರುವ ಮೋಟೆಬೆನ್ನೂರು ಗ್ರಾಮಕ್ಕೆ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗ್ರಾಮಕ್ಕೆ ಸಮರ್ಪಕ ಸರ್ವೀಸ್ ರಸ್ತೆ ಸಹ ನಿರ್ಮಾಣಗೊಂಡಿಲ್ಲ. ಪರಿಣಾಮ ಗ್ರಾಮದ ರೈತರು, ಸಾರ್ವಜನಿಕರು, ಪ್ರಯಾಣಿಕರು ನಿತ್ಯ ಪ್ರಾಣಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಪೂರ್ಣ ಕಾಮಗಾರಿಯಿಂದ ಹೈರಾಣಾದ ಜನ!

ಈ ಕುರಿತಂತೆ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು. ಆದಷ್ಟು ಬೇಗ ಸೇತುವೆ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ಸರ್ವೀಸ್​ ರಸ್ತೆ ಮಾಡಿಕೊಡಿ, ಇಲ್ಲವಾದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ಚತುಷ್ಪಥದಿಂದ ಷಟ್ಪಥವಾಗಿ ನಿರ್ಮಿಸಲಾಗಿದೆ. ಪ್ರತಿ ಗ್ರಾಮಕ್ಕೂ ರಸ್ತೆ ಮೇಲ್ಸೇತುವೆ ನಿರ್ಮಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಮೋಟೆಬೆನ್ನೂರು ಗ್ರಾಮದ ಮೇಲ್ಸೇತುವೆ ಕಾಮಗಾರಿಗೆ ಮಾತ್ರ ಗರಬಡಿದಿದೆ. ಕಾಮಗಾರಿ ಟೆಂಡರ್ ಮುಗಿದಿದ್ದು, ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಸೇತುವೆ ಕಾರ್ಯ ಅರ್ಧಕ್ಕೆ ನಿಂತಿದ್ದು, ಸರ್ವೀಸ್​ ರಸ್ತೆಯನ್ನು ಸಹ ಸರಿಯಾಗಿ ನಿರ್ಮಿಸಿಲ್ಲ. ಪರಿಣಾಮ ಗ್ರಾಮ ದಾಟಲು ಎರಡು ಕಿ.ಮೀ ದೂರವನ್ನು ತಗ್ಗುದಿಣ್ಣೆಗಳಲ್ಲಿ ವಾಹನಗಳನ್ನು ದಾಟಿಸುವ ಅನಿವಾರ್ಯತೆ ಸವಾರರಿಗೆ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚರಿಸುವವರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಮೋಟೆಬೆನ್ನೂರು ದೊಡ್ಡ ಗ್ರಾಮವಾಗಿದ್ದು, ರಸ್ತೆಯ ಆಸುಪಾಸು ಗ್ರಾಮದ ರೈತರ ಜಮೀನುಗಳಿವೆ. ಹಾಗಾಗಿ ದಿನನಿತ್ಯ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯ ರೈತರು.

ಈಗಾಗಲೇ ಸೇತುವೆ ಕಾಮಗಾರಿ ನಿಲ್ಲಿಸಿ ಎರಡು ವರ್ಷಗಳಾಗಿವೆ. ಜನರ ಸಮಸ್ಯೆಗಳ ಕುರಿತಂತೆ ಹಲವು ಬಾರಿ ಗುತ್ತಿಗೆದಾರರಿಗೆ, ಸಂಸದರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅವರಿಂದ ಭರವಸೆ ಸಿಕ್ಕಿದೆಯೇ ಹೊರತು ಸಮಸ್ಯೆ ಪರಿಹಾರವಾಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮೋಟೆಬೆನ್ನೂರು ದಾಟಲು ಎರಡು ಕಡೆ ಎರಡು ಕಿ.ಮೀ.ವರೆಗೆ ಹದಗೆಟ್ಟ ರಸ್ತೆಯಲ್ಲೇ ಸಂಚರಿಸಬೇಕು. ಈ ಎರಡು ಕಿ.ಮೀ. ಅಂತರದಲ್ಲಿಯೇ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಸಾವು ನೋವುಗಳು ಸಂಭವಿಸಿವೆ. ರೈತರು ಸಹ ಪ್ರಾಣ ತೆತ್ತಿದ್ದರೆ, ಜಾನುವಾರುಗಳು ಸಹ ಸಾವನ್ನಪ್ಪಿವೆ. ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಸಮರ್ಪಕ ಸರ್ವೀಸ್​ ರಸ್ತೆ ನಿರ್ಮಿಸಲು ಮುಂದಾಗುತ್ತಿಲ್ಲ.

ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ಪೂರ್ಣಗೊಳಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಪ್ರತಿಭಟನೆಯ ಹಾದಿ ತುಳಿಯುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮರ್ಪಕ ರಸ್ತೆ, ಮೇಲ್ಸೇತುವೆ ನಿರ್ಮಿಸಿಕೊಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.