ರಾಣೆಬೆನ್ನೂರ: ಈಚೆಗೆ ಕಬ್ಬಿನ ಫ್ಯಾಕ್ಟರಿ ನಿರ್ಲಕ್ಷ್ಯ ಖಂಡಿಸಿ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ ರೈತ ಹೊನ್ನಪ್ಪ ಪುಟ್ಟಕ್ಕನವರ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಹೊಲಕ್ಕೆ ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದ್ದಾರೆ.
ತಾಲೂಕಿನ ಮುದೇನೂರ ಗ್ರಾಮದ ರೈತ ಹೊನ್ನಪ್ಪ ಪುಟ್ಟಕ್ಕನವರ ಕಬ್ಬನ್ನು ಸಕಾಲಕ್ಕೆ ಕಾರ್ಖಾನೆಯವರು ಕಟಾವು ಮಾಡಿರಲಿಲ್ಲ. ಇದರಿಂದ ಕಬ್ಬು ನಾಶವಾಗಿತ್ತು. ಬೇಸತ್ತ ರೈತ ಇಡೀ ಗದ್ದೆಗೆ ಬೆಂಕಿ ಹಚ್ಚಿ, ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕೃಷಿ ಸಚಿವ ಬಿ.ಸಿ.ಪಾಟೀಲ ರೈತನಿಗೆ ಸಾಂತ್ವನ ಹೇಳುವುದರ ಜೊತೆಗೆ ಕಾರ್ಖಾನೆ ಜೊತೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.