ETV Bharat / state

ಹಿರೇಕೆರೂರಿನಲ್ಲಿ 40 ಲಕ್ಷ.ರೂ ವೆಚ್ಚದ ಎರಡೂವರೆ ಲಕ್ಷ ಮಾಸ್ಕ್​ ವಿತರಿಸಿದ ಕೃಷಿ ಸಚಿವ - ಹಾವೇರಿ ಮಾಸ್ಕ್​ ವಿತರಣಾ ಸುದ್ದಿ

ಹಾವೇರಿಯ ಹಿರೇಕೆರೂರಿನಲ್ಲಿ 49 ಲಕ್ಷ ರೂ. ವೆಚ್ಚದಲ್ಲಿ ಎರಡೂವರೆ ಲಕ್ಷ ಮಾಸ್ಕ್​ಗಳನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ವಿತರಣೆ ಮಾಡಿದರು.

Minister B.C Patil
ಬಿ.ಸಿ ಪಾಟೀಲ್
author img

By

Published : Aug 16, 2020, 4:45 PM IST

ಹಾವೇರಿ: ಹೃದಯ ಸಂಬಂಧಿ ಕಾಯಿಲೆಗಳು ಮತ್ತು ತೀವ್ರ ಉಸಿರಾಟದ ಸಮಸ್ಯೆ ಇದ್ದರೆ ಮಾತ್ರ ಕೊರೊನಾದಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಜಿಲ್ಲೆಯ ಹಿರೇಕೆರೂರಿನಲ್ಲಿ 40 ಲಕ್ಷ ರೂ. ವೆಚ್ಚದ 2.5 ಲಕ್ಷ ಮಾಸ್ಕ್​ಗಳನ್ನು ವಿತರಣೆ ಮಾಡಿದರು. ಕೊರೊನಾದಿಂದ ಯಾವ ಸಾವು ಸಂಭವಿಸೋದಿಲ್ಲ. ತೀವ್ರ ಉಸಿರಾಟದ ಸಮಸ್ಯೆಯಂತಹ ಕಾಯಿಲೆ, ಇತರೆ ಕಾಯಿಲೆ ಇದ್ರೆ ಮಾತ್ರ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾಯಿಲೆಗಳು ಇರದಿದ್ರೆ ಕೊರೊ‌ನಾ ಬಂದ್ರೆ ಯಾರೂ ಹೆದರುವ ಅಗತ್ಯವಿಲ್ಲ ಎಂದರು.

ನಾನು ಮತ್ತು ನನ್ನ ಪತ್ನಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ಈಗ ನಾವು ಕೊರೊನಾದಿಂದ ಗುಣಮುಖರಾಗಿ ಬಂದಿದ್ದೇವೆ ಎಂದು ತಿಳಿಸಿದ ಅವರು, ಇದೇ ವೇಳೆ ರಾಣೆಬೆನ್ನೂರಿನ ಕೊರೊನಾ ಸೋಂಕಿತ ಪೊಲೀಸ್ ಅಧಿಕಾರಿಗೆ ದೂರವಾಣಿ ಮೂಲಕ ಕರೆಮಾಡಿ, ಬಿಸಿ ನೀರು ಕುಡಿಯಿರಿ, ಸೋಂಕಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು.

ಕಳೆದ ಕೆಲವು ದಿನಗಳ ಹಿಂದಷ್ಟೇ ಕೊರೊನಾ ಸೋಂಕಿನಿಂದ ಬಿ.ಸಿ ಪಾಟೀಲ್ ಗುಣಮುಖರಾಗಿ ಬಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.