ETV Bharat / state

ರಾಣೆಬೆನ್ನೂರಿನಲ್ಲಿ ಮಟ್ಕಾ ದಂಧೆಗೆ ಶಾಸಕರು, ಆಪ್ತರಿಂದ ಬೆಂಬಲ: ನಗರಸಭಾ ಸದಸ್ಯನಿಂದ ಆರೋಪ - Ranebennuru latest news

ರಾಣೆಬೆನ್ನೂರು ನಗರದಲ್ಲಿ ಹೊರ ಜಿಲ್ಲೆಯಿಂದ ಮಟ್ಕಾ ಬಿಡ್ಡರ್​ಗಳು ಬಂದು ದಂಧೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಶಾಸಕರು ಹಾಗೂ ಆಪ್ತರು ಸಹಕರಿಸುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಕೊರೊನಾ ನಿರ್ವಹಣೆ ನಡುವೆ ರಾಣೆಬೆನ್ನೂರು ತಾಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಆರೋಪ ಮಾಡಿದ್ದಾರೆ.

ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ
ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ
author img

By

Published : Aug 9, 2020, 4:31 PM IST

ರಾಣೆಬೆನ್ನೂರು: ಹಾವೇರಿ ಜಿಲ್ಲೆಯಲ್ಲಿ ಮತ್ತು ರಾಣೆಬೆನ್ನೂರು ತಾಲೂಕಿನಾದ್ಯಂತ ಮಟ್ಕಾ ಹಾವಳಿ ಜೋರಾಗಿದೆ. ಇದಕ್ಕೆ ಶಾಸಕರು ಮತ್ತು ಅವರ ಆಪ್ತರು ಕೈ ಜೋಡಿಸಿದ್ದಾರೆ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಆರೋಪ ಮಾಡಿದ್ದಾರೆ.

ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಣೆಬೆನ್ನೂರು ನಗರದಲ್ಲಿ ಹೊರ ಜಿಲ್ಲೆಯಿಂದ ಮಟ್ಕಾ ಬಿಡ್ಡರ್​ಗಳು ಬಂದು ಓಸಿ ದಂಧೆಯಲ್ಲಿ ನಿರತರಾಗಿದ್ದಾರೆ. ಇವರಿಗೆ ಶಾಸಕರು ಹಾಗೂ ಆಪ್ತರು ಸಹಕರಿಸುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಕೊರೊನಾ ನಿರ್ವಹಣೆ ನಡುವೆ ರಾಣೆಬೆನ್ನೂರು ತಾಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಂದ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಕುತ್ತು ತಂದಿದೆ ಎಂದು ಆರೋಪಿಸಿದರು.

ಕುಟುಂಬದ ಮಹಿಳೆಯರು ಜೀವನ ನಡೆಸುವುದು ಹೇಗೆ ಎಂಬುದು ತಿಳಿಯದಂತಾಗಿದೆ ಎಂದು ನಮ್ಮ ಸಂಘದ ಹತ್ತಿರ ಅಳಲು ತೋಡಿಕೊಂಡಿದ್ದಾರೆ ಎಂದರು.

ಆದ್ದರಿಂದ ಇಂತಹ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಮತ್ತು ಸಹಕರಿಸುತ್ತಿರುವ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಎಲ್ಲ ಮಹಿಳಾ ಸಂಘಗಳು ಹಾಗೂ ತಾಲೂಕಿನ ಸಂಘಟನೆಗಳು, ಗೃಹ ಸಚಿವರು ಮತ್ತು ಶಾಸಕರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.