ETV Bharat / state

ಮೆಕ್ಕೆಜೋಳ ಬೆಳೆದ ರೈತನ ಕಣ್ಣಲ್ಲಿ ನೀರು: ಮಳೆಯಲ್ಲಿ ನೆನೆದು ಮೊಳಕೆ ಬಂದ ಬೆಳೆ - heavy rain in haveri

ಕಳೆದ ಕೆಲ ದಿನದಿಂದ ಹಾವೇರಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಅಕಾಲಿಕ ಮಳೆ ಸುರಿದ ಪರಿಣಾಮ ಮೆಕ್ಕೆಜೋಳ ಬೆಳೆಯಲ್ಲಿ ಮೊಳಕೆ ಬಂದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

Maize crop damage, ಮೆಕ್ಕೆಜೋಳ ಬೆಳೆ
Maize crop damage
author img

By

Published : Nov 26, 2021, 7:01 AM IST

ಹಾವೇರಿ: ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆದ ರೈತರು ಕಂಗೆಟ್ಟು ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಅಕಾಲಿಕ ಮಳೆ ಮೂರ್ನಾಲ್ಕು ದಿನದಿಂದ ಕಡಿಮೆಯಾಗಿದೆ. ಆದರೆ, ಮಳೆಯಿಂದ ರಕ್ಷಣೆ ಮಾಡಲು ರಾಶಿ ಹಾಕಿದ್ದ ಗೋವಿನಜೋಳದ ತೆನೆಗಳು ನೀರಿನಲ್ಲಿ ನೆನೆದು ಮೊಳಕೆ ಬಂದಿವೆ. ಪರಿಣಾಮ ಮೆಕ್ಕೆಜೋಳದ ತೆನೆಯ ರಾಶಿಯನ್ನ ನಿತ್ಯ ಬಿಸಿಲಿಗೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಗೆ ಮೊಳಕೆ ಬಂದ ಮೆಕ್ಕೆಜೋಳ ಬೆಳೆ

ಜಿಲ್ಲೆಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆದ ಜಮೀನು ಮಳೆಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಇದರಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳು ದಾಖಲೆ ನೀಡಿ ಎಂದು ಸತಾಯಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಬಂದರೂ ವಾಹನ ಬಿಟ್ಟು ಕೆಳಗೆ ಇಳಿಯುವುದಿಲ್ಲ ಎಂದು ಅನ್ನದಾತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ

ಹಾವೇರಿಯ ಕೆರಿಮತ್ತಿಹಳ್ಳಿ ಗ್ರಾಮದ ಗಂಗಾಧರ ಎಂಬುವರು ಆರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಲಾವಣಿ ಸೇರಿದಂತೆ ಮೆಕ್ಕೆಜೋಳ ಬೆಳೆಯಲು ಎಕರೆಗೆ ಕನಿಷ್ಠ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಳೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, 6 ಕ್ವಿಂಟಲ್ ಬಂದ್ರೆ ನಮ್ಮ ಪುಣ್ಯ ಎಂದು ರೈತ ಗಂಗಾಧರ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.