ETV Bharat / state

ಎಸ್​ಸಿ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ - ಕೊರಚ

ಲಂಬಾಣಿ, ಭೋವಿ, ಕೊರಚ ಹಾಗು ಕೊರಮ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ರಾಣೆಬೆನ್ನೂರಿನಲ್ಲಿ ಸಮುದಾಯದವರು ಪತ್ರ ಚಳುವಳಿ ನಡೆಸಿದ್ದಾರೆ.

ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ
ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ
author img

By

Published : Jun 10, 2020, 3:57 PM IST

ರಾಣೆಬೆನ್ನೂರು: ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಆಗ್ರಹಿಸಿ ಸಮುದಾಯದ ವತಿಯಿಂದ ನಗರದ ಅಂಚೆ ಕಚೇರಿಯ ಮುಂಭಾಗ ಪತ್ರ ಚಳುವಳಿ ನಡೆಸಲಾಯಿತು.

ರಾಣೆಬೆನ್ನೂರಿನಲ್ಲಿ ಪತ್ರ ಚಳುವಳಿ

ಲಂಬಾಣಿ ಸಮುದಾಯದ ಯುವ ಮುಖಂಡ ಬೀರಪ್ಪ ಲಮಾಣಿ ಮಾತನಾಡಿ, ಎಸ್​ಸಿ ಸಮುದಾಯದ ಅತಿ ಹಿಂದುಳಿದ ವರ್ಗಗಳಾದ ಕೊರಮ, ಕೊರಚ, ಲಂಬಾಣಿ ಜನರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ನಡುವೆ ಕೆಲವರು ಹುನ್ನಾರ ನಡೆಸಿ ಎಸ್​ಸಿ ಪಟ್ಟಿಯಿಂದ ಈ ಜಾತಿಗಳನ್ನು ಬಿಡಬೇಕು ಎಂದು ಸುಪ್ರೀಂಕೋರ್ಟ್ ಹೋಗಿದ್ದಾರೆ. ದಯಮಾಡಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ಜಾತಿಗಳನ್ನು ಪಟ್ಟಿಯಿಂದ ಕೈ ಬಿಡಬಾರದು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಎಸ್​ಸಿ ಪಟ್ಟಿಯಿಂದ ಕೈಬಿಟ್ಟರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.