ರಾಣೆಬೆನ್ನೂರು (ಹಾವೇರಿ): ಸಾಲಬಾಧೆ ತಾಳಲಾರದೆ ಸಾರಿಗೆ ನೌಕರನೋರ್ವ ನೇಣಿಗೆ ಶರಣಾದ ಘಟನೆ ರಾಣೆಬೆನ್ನೂರು ತಾಲೂಕಿನ ಮಣಕೂರ ಗ್ರಾಮದಲ್ಲಿ ನಡೆದಿದೆ.
ಗೋಪಾಲರಡ್ಡಿ ಸೋಮರೆಡ್ಡಿ ಜಕ್ಕರೆಡ್ಡಿ(47) ಆತ್ಮಹತ್ಯೆ ಮಾಡಿಕೊಂಡ ನೌಕರ. ಗೋಪಾಲರೆಡ್ಡಿ ಅವರು ರಾಣೆಬೆನ್ನೂರು ನಗರದ ಬಸ್ ಡಿಪೋದಲ್ಲಿ ಚಾಲಕನಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ: ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಗುಂಡೇಟು
ಅಲ್ಲದೆ ಕಳೆದ ಆರು ತಿಂಗಳಿಂದ ಅವರಿಗೆ ಸರಿಯಾಗಿ ವೇತನ ಸಿಗುತ್ತಿರಲಿಲ್ಲ. ಇದರಿಂದ ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದರು. ಇದರಿಂದ ನೌಕರ ಖಿನ್ನತೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಸಮಯದಲ್ಲಿ ಊರ ಹೊರಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹಲಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.